ಅಂತರಾಷ್ಟ್ರೀಯ

ಕೊಬ್ಬು ನಿಯಂತ್ರಣದಿಂದ ಆಯುಷ್ಯ ವೃದ್ಧಿ!

Pinterest LinkedIn Tumblr

Proteins

ವಾಷಿಂಗ್ಟನ್: ಕೊಬ್ಬು ಸಾಗಿಸುವ ಪ್ರೋಟೀನ್​ಗಳನ್ನು ನಿಷ್ಕ್ರಿಯಗೊಳಿಸಿದರೆ ವಯಸ್ಸಾಗುವುದನ್ನು ತಡೆಯಬಹುದು. ಆಯಸ್ಸನ್ನು ನಿಯಂತ್ರಿಸಲು ಮತ್ತು ವಯಸ್ಸಿಗೆ ಸಂಬಂಧಿಸಿದ ರೋಗಗಳನ್ನು ಕಡಿಮೆ ಮಾಡಲು ಈ ವಿಧಾನ ಅತ್ಯಂತ ಪರಿಣಾಮಕಾರಿ ಎನ್ನುತ್ತಿದ್ದಾರೆ ಅಮೆರಿಕ ವಿಜ್ಞಾನಿಗಳು.

ನೆಮಟೋಡ್ ಹುಳಗಳ ಮೇಲೆ ಪ್ರಯೋಗ ನಡೆಸಿದ್ದ ವಿಜ್ಞಾನಿಗಳು ಯಶ ಸಾಧಿಸಿದ್ದಾರೆ. ಶೇ.40ರಷ್ಟು ಹೆಚ್ಚು ಕಾಲ ಬದುಕಿಸಿದ್ದಾರೆ. ನೆಮಟೋಡ್ ಹುಳಗಳಲ್ಲಿ ವಿಟಿಲ್ಲೊಜೆನಿನ್(ವಿಐಟಿ) ಎಂದು ಕರೆಯಲ್ಪಡುವ ಮೊಟ್ಟೆಯ ಲೈಪೋಪ್ರೋಟೀನ್​ಗಳ ಉತ್ಪತ್ತಿಯನ್ನು ತಳಿವಿಜ್ಞಾನದ ಮೂಲಕ ತಡೆಯೊಡ್ಡಿದರು.

ಅಪೊಲಿಪೊಪ್ರೋಟೀನ್ ಬಿ (ಅಪೋಬಿ) ಎನ್ನಲಾದ ಪ್ರೋಟೀನ್​ಅನ್ನು ಇಲಿ, ಮನುಷ್ಯ ಮತ್ತು ಇತರ ಸಸ್ತನಿಗಳು ಉತ್ಪತ್ತಿ ಮಾಡುತ್ತವೆ. ಹೃದಯ ಸಂಬಂಧಿ ರೋಗಗಳಿಗೆ ಸುರಕ್ಷತೆ ನೀಡಲು ಅಪೋಬಿ ಬೆಳವಣಿಗೆಯನ್ನು ಸಂಶೋಧಕರು ನಿಯಂತ್ರಿಸಿದ್ದರು. ಇದರಿಂದ ಮತ್ತೊಂದು ಪ್ರಯೋಜನವೂ ಸಾಧ್ಯ ಎಂಬುದು ಆಗಲೇ ಬೆಳಕಿಗೆ ಬಂದಿದ್ದು. ನೆಮಟೋಡ್ ಹುಳಗಳ ಅಧ್ಯಯನದಲ್ಲಿ ಸಿಕ್ಕ ಅಪೋಬಿಯ ವಿಕಾಸಿತ ಸಂಬಂಧಿ ವಿಟಿಲ್ಲೊಜೆನಿನ್​ನ ಉಪಯೋಗವು ಹೊಸ ಮಾರ್ಗವನ್ನು ತೋರಿತ್ತು.

ವಿಟಿಲೋಜೆನಿನ್ ಜೀವಕೋಶಗಳ ಸಾಮರ್ಥ್ಯವನ್ನು ನಿಯಂತ್ರಿಸುವ ಮೂಲಕ ದೀರ್ಘ ಆಯುಷ್ಯ ಸಂಪಾದಿಸಬಹುದು. ಮನುಷ್ಯನ ಕರುಳಿನ ಒಳಗೆ ಕೊಬ್ಬು ಜಮೆಯಾಗುವುದನ್ನು ನಿರ್ಧರಿಸುವುದು ಆಥೋಲಾಗ್ ಹೊಂದಿರುವ ಪ್ರೋಟೀನ್. ಇಂತಹ ಲೈಪೊಪ್ರೋಟೀನ್​ಗಳ ಉತ್ಪತ್ತಿಯನ್ನು ನಿಯಂತ್ರಿಸಿದರೆ ಕರುಳಲ್ಲಿ ಜಮೆಯಾದ ಕೊಬ್ಬ ಇತರ ಕೆಲಸಗಳಿಗೆ ಖರ್ಚಾಗುತ್ತದೆ. ಆಯುಷ್ಯ ವೃದ್ಧಿಯಾಗುತ್ತದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

Write A Comment