ಅಂತರಾಷ್ಟ್ರೀಯ

ಅಮೆರಿಕದ ಜನತೆ ಸಿಖ್ಖರ ಮೇಲೆ ದಾಳಿ ಮಾಡುವುದೇಕೆ ಗೊತ್ತಾ?

Pinterest LinkedIn Tumblr

sikjವಾಷಿಂಗ್ಟನ್ : ಅಮೆರಿಕದಲ್ಲಿರುವ ಸಿಖ್ ಜನಾಂಗದವರ ಮೇಲೆ ಆಗಾಗ ಮುಸ್ಲಿಮರೆಂದು ಭಾವಿಸಿ ಹಲ್ಲೆ ನಡೆಸಲಾಗುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಪತ್ರಿಕೆಯ ವರದಿಯಂತೆ ವಾಣಿಜ್ಯ ಕೇಂದ್ರದ ಮೇಲೆ ನಡೆದ 9/11 ರ ದಾಳಿಯ ನಂತರ ಅಮೆರಿಕದಲ್ಲಿ ಜನಾಂಗೀಯ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ.

ಅಮೆರಿಕದ ಜನತೆ ಸಿಖ್ಖರನ್ನು ಮುಸ್ಲಿಮರೆಂದು ಭಾವಿಸುತ್ತಿರುವುದೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಇತ್ತೀಚೆಗೆ ನಡೆದುಕೊಂಡು ಹೋಗುತ್ತಿದ್ದ ಕ್ಯಾಲಿಫೋರ್ನಿಯಾದ ಫ್ರೆಸ್ನೊ ನಿವಾಸಿ 68 ವರ್ಷದ ಅಮ್ರಿಕ್ ಸಿಂಗ್ ಮೇಲೆ 20 ವರ್ಷದ ಅಮೆರಿಕ ಯುವಕರು ಹಲ್ಲೆ ಮಾಡಿದ್ದರು.

ಮುಸಿಮ್ ಎಂಬುದಾಗಿ ತಪ್ಪು ಭಾವಿಸಿ, ಇಸ್ಲಾಮಿಕ್ ಸಂಘಟನೆಯ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಲು ಅಮೆರಿಕನ್ನರು ದಾಳಿಗೆ ಮುಂದಾಗುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ.ಆದರೆ, ಜನಾಂಗೀಯ ನಿಂದನೆ ಮತ್ತು ಅಸಹಿಷ್ಣತೆ 20 ನೇ ಶತಮಾನದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಸಿಖ್ ಸಮ್ಮಿಶ್ರ ಸಮರ್ಥನಾ ತಂಡದ ಹಿರಿಯ ಮುಖಂಡ ಸಿಮ್ರನ್ ಜಿತ್ ಸಿಂಗ್ ಹೇಳಿದರು.

Write A Comment