ಅಂತರಾಷ್ಟ್ರೀಯ

ಸೌದಿ ರಾಯಭಾರ ಕಚೇರಿ ಮೇಲೆ ಉಗ್ರರ ದಾಳಿ; ಸೌದಿಯನ್ನು ಹಿಂಬಾಲಿಸಿದ ಯುಎಇ ಮಿತ್ರ ರಾಷ್ಟ್ರಗಳು

Pinterest LinkedIn Tumblr

Emirates

ಸೌದಿ ಅರೇಬಿಯಾ: ಇರಾನ್ ನಲ್ಲಿರುವ ಸೌದಿ ರಾಯಭಾರ ಕಚೇರಿ ಮೇಲೆ ಉಗ್ರರು ನಡೆಸಿರುವ ಭೀಕರ ದಾಳಿಯನ್ನು ಖಂಡಿಸಿ ಸೌದಿ ಅರೇಬಿಯಾ ಇರಾನ್ ನೊಂದಿಗಿನ ವಾಣಿಜ್ಯಾತ್ಮಕ ಸಂಬಂಧವನ್ನು ಕಡಿದುಕೊಂಡಿದ್ದು, ಯುಎಇ ಮಿತ್ರ ರಾಷ್ಟ್ರಗಳು ಕೂಡ ಸೌದಿಯ ನಿರ್ಧಾರವನ್ನೇ ಅನುಸರಿಸಿವೆ.

ಯುಎಇ ಮಿತ್ರ ರಾಷ್ಟ್ರಗಳಾದ ಬಹರೇನ್ ಮತ್ತು ಸುಡಾನ್ ದೇಶಗಳು ಇದೀಗ ಇರಾನ್ ನೊಂದಿಗೆ ಸಂಬಂಧ ಕಡಿತಕ್ಕೆ ಮುಂದಾಗಿವೆ. ರಾಯಭಾರ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕದ ಸನ್ನಿವೇಶಗಳನ್ನು ಗಮನಿಸಿದ್ದ ಸೌದಿ ಅರೇಬಿಯಾ ಉಗ್ರರ ವಿರುದ್ಧ ಇರಾನ್ ಸರ್ಕಾರ ಕೈಗೊಂಡಿದ್ದ ಕ್ರಮಗಳು ಮತ್ತು ನಡೆಯನ್ನು ಖಂಡಿಸಿತ್ತು. ಅಲ್ಲದೆ ಕಳೆದ ಭಾನುವಾರ ಸೌದಿ ಅರೇಬಿಯಾ ಇರಾನ್ ನೊಂದಿಗಿನ ತನ್ನ ವಾಣಿಜ್ಯಾತ್ಮಕ ಸಂಬಂಧಕ್ಕೆ ತಿಲಾಂಜಲಿ ಹಾಕಿತ್ತು.

ಇದರ ಬೆನ್ನಲ್ಲೇ ಸೌದಿ ಮಿತ್ರ ರಾಷ್ಟ್ರಗಳಾದ ಸುಡಾನ್ ಮತ್ತು ಸಣ್ಣ ದ್ವೀಪ ರಾಷ್ಟ್ರ ಬಹರೇನ್ ಕೂಡ ಇಂದು ಇರಾನ್ ಮೇಲೆ ವಾಣಿಜ್ಯಾತ್ಮ ಸಂಬಂಧಕ್ಕೆ ನಿರ್ಬಂಧ ಹೇರಿದೆ.

Write A Comment