ಅಂತರಾಷ್ಟ್ರೀಯ

ಪರೀಕ್ಷಾರ್ಥ ‘ಹೈಡ್ರೋಜನ್ ಬಾಂಬ್’ ಸಿಡಿಸಿದ ಉತ್ತರ ಕೊರಿಯ

Pinterest LinkedIn Tumblr

Korea-web

ಸಿಯೋಲ್: ಪರೀಕ್ಷಾರ್ಥವಾಗಿ ನಡೆಸಿದ ‘ಹೈಡ್ರೋಜನ್ ಬಾಂಬ್’ ಸ್ಫೋಟ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದರೊಂದಿಗೆ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಯಲ್ಲಿ ಇನ್ನೂ ಒಂದು ಮಹತ್ವದ ಹೆಜ್ಜೆ ಮುಂದಿಟ್ಟಂತಾಗಿದೆ. ಹೈಡ್ರೋಜನ್ ಬಾಂಬ್ ಸ್ಫೋಟ ನಿಟ್ಟಿನಲ್ಲಿ ತನ್ನ ಮೊದಲ ಪರೀಕ್ಷೆಯಲ್ಲಿಯೇ ಫಲ ಸಿಕ್ಕಿರುವುದಾಗಿ ಪ್ರತಿಪಾದಿಸಿದೆ.

ಉತ್ತರ ಕೊರಿಯಾ ಸ್ಪಷ್ಟನೆಗೂ ಮುನ್ನ ಭೂಕಂಪ ಸಂಭವಿಸಿತೆಂದು ನಂಬಲಾಗಿತ್ತು. ಪರೀಕ್ಷಾರ್ಥವಾಗಿ ಹೈಡ್ರೋಜನ್ ಬಾಂಬ್ ಸಿಡಿಸಿದ್ದರ ಪರಿಣಾಮ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ಮಾಹಿತಿ ನೀಡಿತು. ಕೆಲವೇ ಕ್ಷಣಗಳಲ್ಲಿ ಉತ್ತರ ಕೊರಿಯಾ ಈ ಕುರಿತು ಸ್ಪಷ್ಟನೆ ನೀಡಿ, ಬೆಳಗ್ಗೆ 10 ಗಂಟೆ ಸುಮಾರಿಗೆ ಪರೀಕ್ಷೆಗೊಳಪಡಿಸಲಾಗಿದೆ. ಪರಿಣಾಮ ಭೂಮಿ ಕಂಪಿಸಿದ್ದಾಗಿ ಸ್ಪಷ್ಟನೆ ನೀಡಿದೆ.

ಈ ಭೂಕಂಪನಕ್ಕೆ ಸಂಬಂಧಿಸಿ ತಕ್ಷಣ ಪ್ರತಿಕ್ರಿಯಿಸಿದ್ದ ಚೀನಾ ಭೂಕಂಪ ಸಂವಹನ ಕೇಂದ್ರ ಉತ್ತರ ಕೊರಿಯಾದ ಅಣುಸ್ಥಾವರಕ್ಕೆ ಸಮೀಪದಲ್ಲಷ್ಟೇ ಕಂಪಿಸಿದ್ದರಿಂದ ಇದು ಸಹಜ ಕಂಪನವಲ್ಲ ಕೃತಕವಾಗಿರುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು. ಉತ್ತರ ಕೊರಿಯಾ ಈಗಾಗಲೇ 2006, 2009 ಮತ್ತು 2013ರಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಜೊತೆಗೆ ಈಗಾಗಲೇ ಸಮರ ಕ್ಷಿಪಣಿ ಪರೀಕ್ಷೆಗಳನ್ನೂ ಅದು ನಡೆಸಿತ್ತು. ಈ ಎಲ್ಲಾ ಪರೀಕ್ಷೆಗಳನ್ನೂ ಅದು ಪುಂಗ್ಯೆ-ರಿ ತಾಣದಲ್ಲಿ ನಡೆಸಿತ್ತು.

Write A Comment