ಅಂತರಾಷ್ಟ್ರೀಯ

ವಂಚನೆ ಪ್ರಕರಣ, ಪಾಕ್ ನಟಿ ಮಿಶಿ ವಿರುದ್ಧ ದೋಷಾರೋಪ

Pinterest LinkedIn Tumblr

pakರಾವಲ್ಪಿಂಡಿ: ಖ್ಯಾತ ನಟಿ ಮಿಶಿ ಖಾನ್ ಅವರ ವಿರುದ್ಧ ವಂಚನೆ ಪ್ರಕರಣ ಒಂದರಲ್ಲಿ ಸ್ಥಳೀಯ ಅಡಿಷನಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ.

ಸಿವಿಲ್ ನ್ಯಾಯಾಧೀಶ ಕಾಶಿಫ್ ಜಾವೇದ್ ಅವರ ಮುಂದೆ ಮಿಶಿ ಖಾನ್ ಗೈರುಹಾಜರಿಯಲ್ಲಿ ಅವರ ಪರ ವಕೀಲರು ಹಾಜರಾಗಿ ತಮ್ಮ ಕಕ್ಷಿದಾರರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿದರು. ಆದರೆ ನ್ಯಾಯಾಧೀಶರು ಮಿಶಿ ಅವರನ್ನು ದೋಷಾರೋಪಕ್ಕೆ ಗುರಿಪಡಿಸಿದರು ಎಂದು ವರದಿಗಳು ತಿಳಿಸಿವೆ.

ಡೈಲಿ ಪಾಕಿಸ್ತಾನ್ ಗ್ಲೋಬಲ್ ವರದಿ ಪ್ರಕಾರ ಡಾ. ಅಫ್ಶನ್ ಅವರು ನಟಿಯ ವಿರುದ್ಧ ರಾವಲ್ಪಿಂಡಿ ನೂ ಟೌನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಡಾ. ಅಫ್ಶನ್ ಪ್ರಕಾರ ತನ್ನ ಕ್ಲಿನಿಕ್ ಕುರಿತ ಪ್ರಚಾರ ಅಭಿಯಾನದ ಸಲುವಾಗಿ ಒಪ್ಪಂದವೊಂದಕ್ಕೆ ಉಭಯರೂ ಒಪ್ಪಿಕೊಂಡಿದ್ದರು. ಅದರಂತೆ ಆಕೆ ಮಿಶಿ ಖಾನ್​ಗೆ 2015ರ ಜುಲೈ ತಿಂಗಳಲ್ಲಿ ಚೆಕ್ ಮೂಲಕ 4,50,000 ರೂಪಾಯಿಗಳನ್ನು ನೀಡಿದ್ದರು. ಆದರೆ ಮಿಶಿ ಖಾನ್ ಅವರು ಒಪ್ಪಿಕೊಂಡಂತೆ ಕ್ಲಿನಿಕ್ ಪ್ರಚಾರಕ್ಕೆ ಬರಲಿಲ್ಲ ಎಂದು ಡಾ. ಅಫ್ಶನ್ ದೂರು ನೀಡಿದ್ದರು.

Write A Comment