ಅಂತರಾಷ್ಟ್ರೀಯ

ಮಂಗನಿಗಿಲ್ಲ ‘ಸೆಲ್ಫಿ’ ಕಾಪಿರೈಟ್, ಅಮೆರಿಕ ಕೋರ್ಟ್ ತೀರ್ಪು

Pinterest LinkedIn Tumblr

07-monkeyselfie-judgment-webನ್ಯೂಯಾಕ್: ಇಂಡೋನೇಷ್ಯಾದಲ್ಲಿ 2011ರಲ್ಲಿ ತೆಗೆದಿದ್ದ ತನ್ನ ಖ್ಯಾತ ‘ಸೆಲ್ಫಿ’ ಚಿತ್ರಕ್ಕಾಗಿ ಉದ್ದಬಾಲದ ಕೋತಿಗೆ ಹಕ್ಕುಸ್ವಾಮ್ಯ (ಕಾಪಿರೈಟ್) ನೀಡಲು ನಿರಾಕರಿಸಿ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ದಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್​ವೆುಂಟ್ ಆಫ್ ಎನಿಮಲ್ಸ್ (ಪಿಇಟಿಎ- ಪೆಟಾ) ಪ್ರಾಣಿಗಳ ಹಕ್ಕು ಸಂಘಟನೆಯು ಸ್ಯಾನ್ ಪ್ರಾನ್ಸಿಸ್ಕೋದಲ್ಲಿನ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಈ ಸಂಬಂಧ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಖಟ್ಲೆ ಹೂಡಿ, ತನ್ನ ‘ಸೆಲ್ಫಿ’ ಯನ್ನು ತೆಗೆದುಕೊಂಡಿದ್ದ 6 ವರ್ಷದ ಪುರುಷ ಕೋತಿ ‘ನರುಟೋ’ವನ್ನು ತನ್ನ ‘ಸೆಲ್ಫಿ’ಯ ಮಾಲೀಕ ಹಾಗೂ ಛಾಯಾಗ್ರಾಹಕ ಎಂಬುದಾಗಿ ಘೋಷಿಸುವಂತೆ ಮನವಿ ಮಾಡಿತ್ತು. ಈ ಕೋತಿ ಕೆಲವು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ತನ್ನ ‘ಸೆಲ್ಫಿ’ ’ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದವು. ಬುಧವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಫೆಡರಲ್ ನ್ಯಾಯಾಧೀಶರು ಉದ್ದಬಾಲದ ಕೋತಿಗೆ ತನ್ನ ‘ಸೆಲ್ಫಿ’ ಚಿತ್ರಗಳ ಮಾಲೀಕ ಎಂಬುದಾಗಿ ಘೋಷಿಸಿ ಹಕ್ಕುಸ್ವಾಮ್ಯ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದರು ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಅಮೆರಿಕದ ಹಕ್ಕು ಕಾಯ್ದೆಯು ‘ಭಾವಚಿತ್ರ ತೆಗೆದವನಿಗೆ ‘ಸೆಲ್ಫಿ’ ಮಾಲೀಕತ್ವವನ್ನು ನೀಡುತ್ತದೆ. ಇಂತಹ ಮಾಲೀಕತ್ವವನ್ನು ಜಾತಿ ಅಧಾರದಲ್ಲಿ ಮಿತಿಗೊಳಿಸುವಂತಹುದು ಕಾಯ್ದೆಯಲ್ಲಿ ಇಲ್ಲ. ‘ನರುಟೊ’ ಕೋತಿಗೆ ಕ್ಯಾಮರಾ ಗಾಜುಗಳಲ್ಲಿ ವಿವಿಧ ರೀತಿಯಾಗಿ ತನ್ನ ‘ಸೆಲ್ಫಿ’ ತೆಗೆದುಕೊಳ್ಳುವ ರೂಢಿ ಇದೆ. ಚಿತ್ರಗಳಿಗೆ ಫೋಸು ಕೊಡುವ ಅಭ್ಯಾಸವೂ ಇದೆ. ಆದ್ದರಿಂದ ನರುಟೋವನ್ನು ತಾನೇ ತೆಗೆದ ‘ಸೆಲ್ಫಿ’ ಚಿತ್ರಗಳ ಮಾಲೀಕ ಮತ್ತು ಛಾಯಾಗ್ರಾಹಕ ಎಂಬುದಾಗಿ ಘೋಷಿಸಿಬೇಕು’ ಎಂದು ಪೆಟಾ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.

Write A Comment