ಅಂತರಾಷ್ಟ್ರೀಯ

ಪರಮೋನ್ನತ ಸುಖ ಬೇಕಾ? ಹಾಗಿದ್ರೆ ಈ ಚಿಂತೆ ಬಿಟ್ಟುಬಿಡಿ

Pinterest LinkedIn Tumblr

1sexಅನ್ಯೋನ್ಯತೆ ಎನ್ನುವುದು ಯಾವುದೇ ಸಂಬಂಧವನ್ನು ಗಟ್ಟಿಯಾಗಿಸಬಲ್ಲದು. ಅದರಲ್ಲೂ ಸಂಗಾತಿಗಳ ವಿಷಯದಲ್ಲಂತೂ ಇದು ಅತ್ಯವಶ್ಯಕ. ಸಂಗಾತಿಗಳ ನಡುವೆ ಮಿಲನವಾಗಬೇಕಾದರೆ ಅನ್ಯೋನ್ಯತೆ ಇರಲೇ ಬೇಕು. ಆಗ ಮಾತ್ರ ಅವರ ಮಿಲನ ಮಹೋತ್ಸವ ಸುಂದರ ಕ್ಷಣವಾಗಿ ನೆನಪಿನಲ್ಲಿ ಉಳಿಯುವುದು.

ಕೆಲವರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಇರುತ್ತದೆ. ತಮ್ಮ ದೇಹ ಸಂಗಾತಿಯೊಂದಿಗೆ ಸೆಕ್ಸ್‌ ನಡೆಸಲು ಸೂಕ್ತವಾಗಿದೆಯೇ ಇಲ್ಲವೋ ಎನ್ನುವ ಪ್ರಶ್ನೆ ಮನಸ್ಸಿನಲ್ಲಿರುತ್ತದೆ. ಹಾಗಾಗಿ ನಿಮ್ಮ ಸಂಗಾತಿಗಿರುವ ದೇಹ ಸೌಂದರ್ಯದ ಕೀಳರಿಮೆಯನ್ನು ದೂರ ಮಾಡಲು ನಿಮ್ಮ ಸಹಕಾರವೂ ಮುಖ್ಯ. ಅದಕ್ಕಾಗಿ ಕೆಲವು ಟಿಪ್ಸ್‌ ಇಲ್ಲಿದೆ.

ನಿಮ್ಮ ದೇಹದ ಬಗ್ಗೆ ಪಾಸಿಟಿವ್‌ ಆಗಿರಿ

ನೀವು ನಿಮ್ಮ ದೇಹದ ಸೌಂದರ್ಯದ ಬಗ್ಗೆ ಕೀಳರಿಮೆ ಬಿಟ್ಟು ಬಿಡಿ. ನಿಮ್ಮ ದೇಹ ಸೌಂದರ್ಯವನ್ನು ಕನ್ನಡಿ ಬಳಿ ನಿಂತು ನೋಡಿ ಆಗ ನಿಮಗೆ ನಿಮ್ಮ ದೇಹ ಸೌಂದರ್ಯ ಹೇಗಿದೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ. ಲೈಂಗಿಕ ಕ್ರಿಯೆ ನಡೆಸುವಾಗ ಲೈಟ್‌ ಆಫ್‌ ಮಾಡುವ ಬದಲು, ಲೈಟ್‌‌ ಹಾಕಿಯೇ ಲೈಂಗಿಕ ಕ್ರಿಯೆ ನಡೆಸಿ ಇದರಿಂದ ಒಬ್ಬರಿಗೊಬ್ಬರು ತಮ್ಮ ದೇಹ ಸೌಂದರ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಬಿಟ್ಟು ನಿಮ್ಮ ಸೌಂದರ್ಯದ ಬಗ್ಗೆ ಹೆಮ್ಮೆ ಪಡಿ . ಆಗ ಮಾತ್ರ ಸೆಕ್ಸ್‌ನಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯ.

ಷರತ್ತಿಲ್ಲದ ಪ್ರೀತಿ

ಷರತ್ತಿಲ್ಲದ ಪ್ರೀತಿ ಎಂಬುದು  ಶಾರೀರಿಕತೆ, ಮಾನಸಿಕತೆ, ಸಾಮಾಜಿಕ ಮಾನದಂಡಗಳಿಗೂ ಮೀರಿದ್ದು. ಇಲ್ಲಿ ಸಂಗಾತಿಗಳು ತಮ್ಮಿಬ್ಬರ ನಡುವೆ ಎಷ್ಟೇ ಲೋಪದೋಷಗಳಿದ್ದರೂ, ಅವ್ಯಾವುವೂ ಗಣನೆಗೆ ಬರುವುದಿಲ್ಲ. ಇಬ್ಬರೂ ಸಂಪೂರ್ಣವಾಗಿ ಸೆಕ್ಸ್‌ ಜೀವನವನ್ನು ಆನಂದಿಸುತ್ತಾರೆ.

ವಾಸ್ತವವನ್ನು ಸ್ವೀಕರಿಸುವುದು

ತಮ್ಮ ಸಂಗಾತಿಯಲ್ಲಿ ಯಾವುದೇ ರೀತಿಯ ಕುಂದು ಕೊರತೆಗಳಿದ್ದರೂ ಅವನ್ನು ಸ್ವೀಕರಿಸಿ ಆಕೆ/ಆತನನ್ನು ಪ್ರೀತಿಸುವುದು. ಒಬ್ಬರ ದೇಹವನ್ನು ಒಪ್ಪಿಕೊಳ್ಳುವುದು ಜೀವನದ ದೊಡ್ಡ ಸಾಧನೆಯಾಗಿದೆ. ನಾವು ನಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಯಾವಾಗಲು ಬೆಸ್ಟ್‌ಗಾಗಿಯೇ ಕಾಯುತ್ತೇವೆ. ಅದಕ್ಕಾಗಿ ಮೊದಲು ನಾವು ನಮ್ಮನ್ನ ಪ್ರೀತಿ ಮಾಡಬೇಕು. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಮಿಲನದ ಸಂದರ್ಭದಲ್ಲಿ ನಿಮ್ಮೊಳಗಿನ ಅಂಜಿಕೆಯನ್ನು ದೂರಮಾಡಿ ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮಿಲನ ಮಹೋತ್ಸವವನ್ನು ಆನಂದಿಸಿ

ಮಿಲನದ ಸಂದರ್ಭ ಇಬ್ಬರೂ ಆ ಕ್ರಿಯೆಯನ್ನು ಆನಂದಿಸಿದರೆ ಒಬ್ಬರಿಗೊಬ್ಬರು ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ  ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಹಾಗಾಗಿ ಸೆಕ್ಸ್‌ ಮಾಡುವಾಗ ಒಬ್ಬರಿಗೊಬ್ಬರು ಕಂಫರ್ಟೇಬಲ್‌ ಆಗಿರುವುದು ಮುಖ್ಯ. ಸೆಕ್ಸ್‌ ಮಾಡುವ ಮೊದಲು ಇಬ್ಬರೂ ತಮ್ಮ ದೇಹವನ್ನು ಒಬ್ಬರಿಗೊಬ್ಬರು ತೋರಿಸಿಕೊಳ್ಳುವುದರಿಂದ ಮಿಲನದ ಸಂದರ್ಭ ಯಾವುದೇ ರೀತಿ ನಾಚಿಕೆ ಇರುವುದಿಲ್ಲ. ಉತ್ತಮ ಸೆಕ್ಸ್‌ಗಾಗಿ ಸರಿಯಾದ ದೇಹಾಕೃತಿ ಹೊಂದುವುದು ಮುಖ್ಯವಲ್ಲ. ಸೆಕ್ಸ್‌ ಕ್ರಿಯೆಯಲ್ಲಿ ನೀವು ಯಾವ ರೀತಿ ಪಾಲ್ಗೊಳ್ಳುತ್ತೀರಿ, ನಿಮ್ಮ ಸಂಗಾತಿಗೆ ಎಷ್ಟರ ಮಟ್ಟಿಗೆ ಖುಷಿಯನ್ನು ನೀಡುತ್ತೀರಿ ಎನ್ನುವುದು ಮುಖ್ಯ.

Write A Comment