ಅಂತರಾಷ್ಟ್ರೀಯ

ಹೌದು ಮರಾಯ್ರೇ: ಅಮೆರಿಕದಲ್ಲಿ ಮೊಮ್ಮಗಳಿಗೆ ಜನ್ಮ ನೀಡಿದ ಅಜ್ಜಿ!

Pinterest LinkedIn Tumblr

grandma-baby_759_fbಹೌಸ್ಟನ್‌ : ಮೂರು ಬಾರಿ ಗರ್ಭ ಪಾತಕ್ಕೊಳಗಾಗಿ ಇನ್ನು ಮಕ್ಕಳನ್ನು ಪಡೆಯುವ ಸಾಧ್ಯತೆ ಕಳೆದುಕೊಂಡಿದ್ದ ಮಗಳ ಭ್ರೂಣವನ್ನು ತಾಯಿಯೊಬ್ಬಳು  ಹೊತ್ತು ಹೆತ್ತ ಘಟನೆ ಅಮೆರಿಕದಲ್ಲಿ ನಡೆದಿದೆ. ಇದರಿಂದಾಗಿ ಅಜ್ಜಿ ಮೊಮ್ಮಗಳಿಗೆ ಜನ್ಮ ನೀಡಿದ ವಿಸ್ಮಯ ಸಂಭವಿಸಿದೆ.

33 ರ ಹರೆಯದ ಕಿಸ್ಸಾಕ್‌ ಎನ್ನುವವರ ಪತ್ನಿ ಕೆಲ್ಲಿ ಎಂಬ 28 ವರ್ಷದ ಮಹಿಳೆ ಬಂಜೆತನ ನಿವಾರಣೆಯ ಹಲವು ಚಿಕಿತ್ಸೆಗಳಿಗೆ ಒಳಗಾಗಿ ಗರ್ಭ ಧರಿಸಿದ್ದಳು. ಆದರೆ ಮೂರು ಬಾರಿ ಗರ್ಭಪಾತಕ್ಕೊಳಗಾಗಿ ತಾಯಿ ಯಾಗುವ ಕನಸು ಕಮರಿ ಹೋಗಿತ್ತು.

ಈ ವೇಳೆ ಕೆಲ್ಲಿಯ ತಾಯಿ 56 ರ ಹರೆಯದ ಟ್ರೆಸಿ ಥೊಮ್ಸನ್‌ ಹಿಂದಿನ ಚಿಕಿತ್ಸೆ ವೇಳೆ ವೈದ್ಯರು ತೆಗೆದ ಭ್ರೂಣವನ್ನು ತನ್ನ ಗರ್ಭಾಶಯದಲ್ಲಿ ಬೆಳೆಸಿ ಮಗಳಿಗೆ ಮಗುವನ್ನು ಕರುಣಿಸಿ ಮಹಾತಾಯಿ ಎನಿಸಿದ್ದಾಳೆ.

ಟೆಕ್ಸಾಸ್‌ನಲ್ಲಿರುವ ಪ್ಲಾನೊ ಮೆಡಿಕಲ್‌ ಸೆಂಟರ್‌ ಟ್ರೆಸಿ ಥೊಮ್ಸನ್‌ ಅವರ ಚಿಕಿತ್ಸೆ ಗೆ ನೆರವಾಗಿತ್ತು. ಟ್ರೆಸಿ ಜನ್ಮ ನೀಡಿರುವ ಹೆಣ್ಣು ಮಗು 3 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ.
-ಉದಯವಾಣಿ

Write A Comment