ಅಂತರಾಷ್ಟ್ರೀಯ

ಗಂಡ-ಹೆಂಡತಿ ಎತ್ತರದಲ್ಲಿ ಹೆಚ್ಚು ವ್ಯತ್ಯಾಸವಿದ್ದರೆ, ಸುಖದಾಂಪತ್ಯ!

Pinterest LinkedIn Tumblr

Sameekshe-today-Dec-5ದಂಪತಿ ಅಂದ್ರೆ ಜೋಡಿ ಚೆನ್ನಾಗಿ ಕಾಣ್ಬೇಕು. ಗಂಡ ಅಂದ್ರೆ ಸ್ವಲ್ಪ ಉದ್ದ ಜಾಸ್ತಿ, ಹೆಂಡತಿ ಅಂದ್ರೆ ಸ್ವಲ್ಪ ಉದ್ದ ಕಡಿಮೆ. ಹಾಗಂತ ಎತ್ತರ ತೀರ ಹೆಚ್ಚು ಕಡ್ಮೆ ಇದ್ರೆ ಚೆನ್ನಾಗಿ ಕಾಣಲ್ಲ ಎಂದೆಲ್ಲ ನಮ್ಮಲ್ಲಿದೆ. ಆದರೆ ಇಲ್ಲೊಂದು ಸಮೀಕ್ಷೆಯ ಪ್ರಕಾರ, ಗಂಡ-ಹೆಂಡತಿ ಎತ್ತರದಲ್ಲಿ ಗಂಡ ಹೆಚ್ಚು ಉದ್ದ, ಹೆಂಡತಿ ಕುಳ್ಳಗೆ ಇದ್ದರೆ ಸುಖ ದಾಂಪತ್ಯ ಎಂದು ಹೇಳಿದೆ. ದಕ್ಷಿಣ ಕೊರಿಯಾದ ಕಾಂಕುಕ್‌ ವಿಶ್ವವಿದ್ಯಾಲಯ ನಡೆಸಿದ ಈ ಸಮೀಕ್ಷೆಯಲ್ಲಿ ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ, ಹೆಂಡತಿ ಹ್ಯಾಪಿಯಾಗಿರುತ್ತಾಳೆ ಎಂದು ಹೇಳಲಾಗಿದೆ. 7850 ಮಹಿಳೆಯರನ್ನು ಗುರಿಯಾಗಿಸಿಕೊಂಡು ದೀರ್ಘಾವಧಿಯ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಇಂತಹ ದಂಪತಿಗಳು ಸುಮಾರು 18 ವರ್ಷಗಳ ತುಂಬಾ ಸಂತೋಷದಲ್ಲಿರುತ್ತಾರಂತೆ. ಗಂಡನ ಎತ್ತರ, ವ್ಯಕ್ತಿತ್ವ ಎತ್ತರ ಕಡಿಮೆ ಇರುವ ಮಹಿಳೆಯನ್ನು ತೀವ್ರವಾಗಿ ಪ್ರಭಾವಿಸುತ್ತದೆಯಂತೆ. ಅಲ್ಲದೇ ಉದ್ದಕಿರುವ ಗಂಡಸರತ್ತ ಮಹಿಳೆಯರು ಆಕರ್ಷಣೆಗೊಳಗಾಗುವುದೂ ಹೆಚ್ಚಂತೆ. ಜೊತೆಗೆ ತಮಗಿಂತ ತುಂಬಾ ಎತ್ತರವಿರುವ ಗಂಡಸರನ್ನು ಮದ್ವೆಯಾದ ಮಹಿಳೆಯರಲ್ಲಿ ಸಂತಾನ ಫ‌ಲವತ್ತತೆಯ ಅಂಶಗಳೂ ಹೆಚ್ಚು ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಫ‌ಲಿತಗಳು…
*ಹೆಚ್ಚು ಎತ್ತರವಿರುವ ಗಂಡನ ವ್ಯಕ್ತಿತ್ವ, ಕಡಿಮೆ ಎತ್ತರದ ಹೆಂಡತಿಯನ್ನು ತೀವ್ರವಾಗಿ ಪ್ರಭಾವಿಸುತ್ತಂತೆ!

*ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ ಅಂತಹ ದಾಂಪತ್ಯದಲ್ಲಿ ಹೆಂಡತಿ ಭಾರೀ ಹ್ಯಾಪಿ

*ಉದ್ದಕಿರುವ ಗಂಡಸರತ್ತ ಮಹಿಳೆಯರು ಆಕರ್ಷಿತರಾಗುವುದೂ ಹೆಚ್ಚು
-ಉದಯವಾಣಿ

Write A Comment