ಅಂತರಾಷ್ಟ್ರೀಯ

ಪ್ಯಾಂಟ್ ಹಾಕೋದೆ ಇಲ್ಲಾ..ಎಲ್ರೂ ದಿನವೆಲ್ಲಾ ಹಾಗೆ ಇರ್ತಾರೆ..ಯಾಕೆ ಹೀಗೆ!

Pinterest LinkedIn Tumblr

3pantನ್ಯೂಯಾರ್ಕ್‌: ಈ ಜಗತ್ತಿನಲ್ಲಿ ಕೆಲವೊಂದು ದೇಶಗಳಿವೆ, ಅಲ್ಲಿಯ ಜನರಿಗೆ ಇಡೀ ಜಗತ್ತೇ ಹೊತ್ತಿ ಉರಿದರೂ ‘ನೋ ಟೆನ್ಶನ್’. ಕೆಲವು ದೇಶಗಳು ದಿನ ಬೆಳಗಾದರೆ ಧರ್ಮ, ಜಾತಿ, ಅಸಾಕ್ಷರತೆ, ಅಸಮಾನತೆ, ಹಿಂಸೆ ಹೀಗೆ ಅಸಂತುಷ್ಟ ಸಮಾಜದ ಪ್ರತಿಬಿಂಬವಾಗಿ ಗೋಚರಿಸಿದರೆ, ಕೆಲವು ದೇಶಗಳು, ಇದ್ಯಾವುದರ ಗೊಡವೆಗೆ ಹೋಗದೆ ಒಂದು ಶಾಂತಿಯುತ ಹಾಗೂ ಮನಷ್ಯ ಸಂಬಂಧಗಳಿಗೆ ಬೆಲೆ ಕೊಡುವ ಸಮಾಜ ನಿರ್ಮಿಸಿ ಹಾಯಾಗಿದ್ದಾರೆ.

ಯೂರೋಪ್ ಖಂಡದ ಸುಮಾರು 60 ದೇಶಗಳಲ್ಲಿ ಇಂದು ಸ್ಕೂಲ್ ಹೋಗುವವರು, ಆಫೀಸ್ ಹೋಗುವವರು, ಶಾಪಿಂಗ್ ಹೋಗುವವರು. ಹುಡುಗಿಯರನ್ನು ನೋಡಲೆಂದೇ ಊರು ಸುತ್ತುವವರು, ಮನೆಯಲ್ಲಿ ಇರುವವರು ಹೀಗೆ ಯಾರೂ ಪ್ಯಾಂಟ್ ಧರಿಸಿರಲಿಲ್ಲ. ಕೇವಲ ಪುರುಷರಷ್ಟೇ ಅಲ್ಲ ಮಹಿಳೆಯರು ಕೂಡ ಪ್ಯಾಂಟ್ ಧರಿಸದೇ ಊರೆಲ್ಲಾ ಸುತ್ತಿದ್ದಾರೆ.

ಏನಪ್ಪಾ ಬಂದಿತ್ತು ಇವರಿಗೆ ರೋಗ ಅಂತಾ ನೀವು ಕೇಳುವ ಮುನ್ನ, ಜರ್ಮನಿ, ಜೆಕ್ ರಿಪಬ್ಲಿಕ್, ಇಂಗ್ಲೆಂಡ್ ಸೇರಿದಂತೆ ಸುಮಾರು 60 ಯೋರೋಪಿಯನ್ ದೇಶಗಳಲ್ಲಿ ಜನವರಿ 11ನ್ನು ‘ನೋ ಪ್ಯಾಂಟ್ ಸಬ್‌ವೇ ರೈಡ್’ ದಿನವನ್ನಾಗಿ ಆಚರಿಸಲಾಗುತ್ತದೆ.

‘ನೋ ಪ್ಯಾಂಟ್ ಸಬ್‌ವೇ ರೈಡ್’ ಪ್ರಕಾರ ಇಂದು ಎಲ್ಲರೂ ಪ್ಯಾಂಟ್ ಧರಿಸದೇ ತಮ್ಮ ದಿನ ನಿತ್ಯದ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಅದರಂತೆ ಈ 60 ದೇಶಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪುರುಷರು, ಮಹಿಳೆಯರು ಹೀಗೆ ಎಲ್ಲರೂ ಪ್ಯಾಂಟ್ ಧರಿಸದೇ ತಮ್ಮ ತಮ್ಮ ಕಾರ್ಯಚಟುವಟಿಕೆಯಲ್ಲಿ ಮಗ್ನರಾಗಿದ್ದರು.

2002ರಲ್ಲಿ ನ್ಯೂಯಾರ್ಕ್‌‌ನಲ್ಲಿ ಕೇವಲ ಏಳು ಜನರಿಂದ ಆರಂಭವಾದ ಈ ಅಭಿಯಾನವನ್ನು ಇಂದು ಜಗತ್ತಿನ 60 ದೇಶಗಳು ಪಾಲಿಸುತ್ತವೆ. ಈ ಅಭಿಯಾನದಲ್ಲಿ ಯಾರೂ ಮತ್ತೊಬ್ಬರ ಕಾಲುಗಳನ್ನು ನೋಡುವುದಿಲ್ಲ ಹಾಗೂ ರೈಲಿನಲ್ಲಿ ಕುಳಿತಾಗ ಒಬ್ಬರಿಗೊಬ್ಬರು ಅಪರಿಚಿತರಾಗಿ ಸವಾರಿ ನಡೆಸುತ್ತಾರೆ.

ಈ ಹಿಂದೆ ಲಾಟ್ವಿಯಾ ಈ ‘ನೋ ಪ್ಯಾಂಟ್ ಸಬ್‌ವೇ ರೈಡ್‌‌‌’ನ್ನು ನಿಷೇಧಗೊಳಿಸಿತ್ತಾದರೂ, ಈ ಅಭಿಯಾನದ ಅಬ್ಬರದ ಪ್ರಚಾರಕ್ಕೆ ತಲೆಬಾಗಿ ಈ ಅಭಿಯಾನಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದು ವಿಶೇಷ

Write A Comment