ಅಂತರಾಷ್ಟ್ರೀಯ

26/11 ವಿಚಾರಣೆಗೆ ಹಿನ್ನಡೆ; ಧ್ವನಿ ಪರೀಕ್ಷೆಗೆ ಪಾಕ್ ಕೋರ್ಟ್ ನಕಾರ

Pinterest LinkedIn Tumblr

mumbaiattacksಇಸ್ಲಾಮಾಬಾದ್: ಮುಂಬೈ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಹಿನ್ನಡೆ ಎಂಬಂತೆ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಝಕಿ ಉರ್ ರೆಹಮಾನ್ ಲಖ್ವಿ ಹಾಗೂ ಆರು ಮಂದಿ ಶಂಕಿತ ಉಗ್ರರ ಧ್ವನಿ ಮಾದರಿ ಪರೀಕ್ಷೆಗೆ ಅವಕಾಶ ಕೊಡಬೇಕೆಂದು ಕೋರಿ ಪಾಕ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪಾಕ್ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಮುಂಬೈ ಸ್ಫೋಟದ ಸಂದರ್ಭದಲ್ಲಿ ಉಗ್ರರು ಸಂಭಾಷಣೆ ನಡೆಸಿದ್ದನ್ನು ಭಾರತೀಯ ಗುಪ್ತಚರ ಇಲಾಖೆ ಪತ್ತೆ ಹಚ್ಚಿತ್ತು. ಆ ನಿಟ್ಟಿನಲ್ಲಿ ಬಂಧಿತ ಶಂಕಿತ ಉಗ್ರರ ಧ್ವನಿ ಮಾದರಿ ಜೊತೆ ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸುವ ನೆಲೆಯಲ್ಲಿ ಅವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಷನ್ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಆದರೆ ಪಾಕ್ ಸರ್ಕಾರದ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ಹಾಗಾಗಿ ಮುಂಬೈ ದಾಳಿ ಪ್ರಕರಣದ ತನಿಖೆಗೆ ಹಿನ್ನಡೆ ಉಂಟಾದಂತಾಗಿದೆ.

2011 ಮತ್ತು 2015ರಲ್ಲಿ ಉಗ್ರ ಲಖ್ವಿ ಧ್ವನಿ ಮಾದರಿ ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಕೋರಿದ್ದ ಸಂದರ್ಭದಲ್ಲಿ ವಿಚಾರಾಣಾ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಆರೋಪಿಯ ಧ್ವನಿ ಮಾದರಿ ಪರೀಕ್ಷೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಿತ್ತು.
-ಉದಯವಾಣಿ

Write A Comment