ಅಂತರಾಷ್ಟ್ರೀಯ

ವಾಟ್ಸ್​ಆಪ್ ಬಳಕೆದಾರರ ಸಂಖ್ಯೆ ಈಗ ಒಂದು ಶತಕೋಟಿ

Pinterest LinkedIn Tumblr

02-WhatsAppನ್ಯೂಯಾರ್ಕ್: ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್​ಆಪ್ ಈಗ 100 ಕೋಟಿ ಬಳಕೆದಾರರನ್ನು ತಲುಪಿ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಿಇಒ ಮಾರ್ಕ್ ಜುಗರ್​ಬರ್ಗ್ ಮಂಗಳವಾರ ಪ್ರಕಟಿಸಿದರು. ಪ್ರತಿದಿನ 4200 ಕೋಟಿ ಸಂದೇಶಗಳು ವಾಟ್ಸ್​ಆಪ್​ನಲ್ಲಿ ವಿನಿಮಯವಾಗುತ್ತಿವೆ ಎಂದು ಅವರು ಹೇಳಿದರು.

‘100 ಕೋಟಿ ಜನರು ಈಗ ವಾಟ್ಸ್ ಆಪ್​ನನ್ನು ಬಳಸುತ್ತಿದ್ದಾರೆ. ಶತಕೋಟಿ ಜನರನ್ನು ಸಂರ್ಪಸುವ ಕೆಲವೇ ಕೆಲವು ಸೇವೆಗಳಿವೆ. ಇಡೀ ಜಗತ್ತನ್ನು ಪರಸ್ಪರ ಸಂರ್ಪಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಅವರು ಫೇಸ್​ಬುಕ್ ನಲ್ಲಿ ಬರೆದಿದ್ದಾರೆ.

ವಾಟ್ಸ್ ಆಪ್​ನಲ್ಲಿ 160 ಕೋಟಿ ಫೋಟೋಗಳು ಮತ್ತು 2500 ಲಕ್ಷ ವಿಡಿಯೋಗಳು ಪ್ರತಿದಿನ 53 ಭಾಷೆಗಳಲ್ಲಿ ವಿನಿಮಯಗೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.

Write A Comment