ಅಂತರಾಷ್ಟ್ರೀಯ

ಚಿಲಿಯಲ್ಲಿ 6.3ರಷ್ಟು ತೀವ್ರತೆಯ ಭೂಕಂಪ

Pinterest LinkedIn Tumblr

hhhhhಸ್ಯಾಂಟಿಯಾಗೊ (ಚಿಲಿ) (ಪಿಟಿಐ): ಚಿಲಿಯ ಕೇಂದ್ರ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.

ಕಂಪನದಿಂದಾಗಿ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಮನೆಗಳ ಕಪಾಟುಗಳಲ್ಲಿ ವಸ್ತುಗಳೆಲ್ಲ ನೆಲಕ್ಕುರುಳಿವೆ. ಕೆಲವು ನಿವಾಸಿಗಳನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಕಂಪನದ ಕೇಂದ್ರ ಬಿಂದು ಸ್ಯಾಂಟಿಯಾಗೊ ಕರಾವಳಿ ತೀರದ 35 ಕಿ. ಮೀಟರ್‌ ಆಳದಲ್ಲಿ ದಾಖಲಾಗಿದೆ. ಇಲ್ಲಿನ ಜನರಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು , ತುರ್ತುಪರಿಸ್ಥಿತಿ ಘೋಷಿಸಲಾಗಿದೆ ಎಂದು ಚಿಲಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ

Write A Comment