ಅಂತರಾಷ್ಟ್ರೀಯ

ನೈಜೀರಿಯ : ಮಹಿಳಾ ಬಾಂಬರ್‌ಗಳಿಬ್ಬರ ದಾಳಿಗೆ 60ಕ್ಕೂ ಹೆಚ್ಚು ನಿರಾಶ್ರಿತರು ಬಲಿ

Pinterest LinkedIn Tumblr

nigeriyaಮೈದುಗುರಿ, ಫೆ.11-ಬೊಕೊ ಹರಾಮ್ ಉಗ್ರರ ಅಟ್ಟಹಾಸದಲ್ಲಿ ಸಿಕ್ಕು ನೊಂದು, ಮನೆ-ಊರು ತೊರೆದು ನಿರಾಶ್ರಿತ ಶಿಬಿರದಲ್ಲಿದ್ದ 60ಕ್ಕೂ ಹೆಚ್ಚು ಮಂದಿಯನ್ನು ಮಹಿಳಾ ಬಾಂಬರ್‌ಗಳಿಬ್ಬರು ಬಲಿ ತೆಗೆದುಕೊಂಡಿದ್ದಾರೆ.

ಈಶಾನ್ಯ ನೈಜೀರಿಯದ ದಿಕ್ವಾದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ನಿನ್ನೆ ರಾತ್ರಿ ಇಬ್ಬರು ಮಹಿಳಾ ಬಾಂಬರ್‌ಗಳು ದಾಳಿ ಮಾಡಿ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಈ ಬಾಂಬ್ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 60ಕ್ಕೂ ಹೆಚ್ಚಿನ ಸಂಖ್ಯೆಯ ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಮೈದುಗುರಿ ರಾಜಧಾನಿ ಬೋರ್ನೊದಿಂದ ಸುಮಾರು 90ಕಿ.ಮೀ. ದೂರದಲ್ಲಿರುವ ದಿಕ್ಸಾ ಬೊಕೊ ಹರಾಂ ನಿಯಂತ್ರಣದಲ್ಲಿದ್ದು ಅದರ ವಶಕ್ಕಾಗಿ ಸರ್ಕಾರಿ ಸೇನೆ ಕಳೆದವಾರ ದಾಳಿ ನಡೆಸಿತ್ತು. ಇದರ ಸೇಡು ತೀರಿಸಿಕೊಳ್ಳಲು ಬೊಕೊ ಹರಾಮ್ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಇದರೊಂದಿಗೆ ಮತ್ತೆ ನೈಜೀರಿಯದ ವಿವಿಧೆಡೆಗಳಲ್ಲಿ ಭದ್ರತಾ ಸಮಸ್ಯೆ ಮತ್ತೆ ಎದುರಾಗಿದೆ.

Write A Comment