ಅಂತರಾಷ್ಟ್ರೀಯ

ಸೋಮಾರಿಗಳಿಗಾಗಿ ಉದ್ಯೋಗಾವಕಾಶ ನೀಡ್ತಿದೆ ಈ ರೆಸಾರ್ಟ್

Pinterest LinkedIn Tumblr

panda-job

ಲಂಡನ್: ಇಂಗ್ಲೆಂಡಿನ ಸರ್ರೆ ನಗರದಲ್ಲಿರುವ ಚೆಸ್ಸಿಂಗ್ಟನ್ ವಲ್ರ್ಡ್ ಆಫ್ ಅಡ್ವೆಂಚರ್ಸ್ ಅನ್ನೋ ರೆಸಾರ್ಟ್‍ನಲ್ಲಿ ಸೋಮಾರಿಗಳಿಗಾಗಯೇ ಸೂಪರ್ ಆಗಿರೋ ಉದ್ಯೋಗಾವಕಾಶ ನೀಡಲಾಗ್ತಿದೆ.

ಇದೊಂದು ಥೀಮ್ ರೆಸಾರ್ಟ್ ಆಗಿದ್ದು ಇದೇ ವರ್ಷ ಇಲ್ಲಿ ನಡೆಯಲಿರುವ ಪಾಂಡಾಮೋನಿಯಮ್ ಎಂಬ ಪಾಂಡಾ ಥೀಮ್‍ನ ಕಾರ್ಯಕ್ರಮಕ್ಕಾಗಿ ಕೆಲಸಗಾರರು ಬೇಕಾಗಿದ್ದಾರಂತೆ. ಕೆಲಸಕ್ಕೆ ಅರ್ಜಿ ಹಾಕಲು ಇರಬೇಕಾದ ಅರ್ಹತೆ ಏನಪ್ಪಾ ಅಂದ್ರೆ ಪಾಂಡಾ ರೀತಿ ವಿನ್ಯಾಸಗೊಳಿಸಲಾಗಿರೋ ಉಡುಪು ಧರಿಸಿ ಇಡೀ ದಿನ ಸೋಮಾರಿಯಾಗಿ ಬಿದ್ದಿರಬೇಕು. ಪಾಂಡಾಗಳು ತಿನ್ನುವ ಬಿದಿರಿನ ಕಡ್ಡಿಯನ್ನು ತಿನ್ನಬೇಕು. ಬಣ್ಣ ಕುರುಡು ಇರಬೇಕು ಮತ್ತು ಇಡೀ ದಿನ ದಪ್ಪನೆಯ ಪಾಂಡಾ ಕೋಟ್ ಧರಿಸಲು ಸಿದ್ದರಿರಬೇಕು.

ಇಷ್ಟೆಲ್ಲಾ ಮಾಡೋಕೆ ರೆಡಿ ಇರೋರು ಕೆಲಸಕ್ಕೆ ಅರ್ಜಿ ಹಾಕಬಹುದು ಅಂತ ಈ ರೆಸಾರ್ಟಿನ ವೆಬ್‍ಸೈಟ್‍ನಲ್ಲಿ ಹೇಳಲಾಗಿದೆ.

Write A Comment