ನವದೆಹಲಿ: ಯುದ್ಧದಿಂದ ತತ್ತರಿಸಿರುವ ಸಿರಿಯಾದಲ್ಲಿ ಮಕ್ಕಳ ಪರಿಸ್ಥಿತಿ ಅಸಹನೀಯವಾಗಿದೆ. ತಿನ್ನಲು ಆಹಾರವಿಲ್ಲದೆ ಹಸಿರು ಹುಲ್ಲು, ಹುಳಗಳನ್ನೇ ತಿಂದು ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿರಿಯಾದ ಸುಮಾರು 10 ಲಕ್ಷ ಮಕ್ಕಳಲ್ಲಿ ಶೇ. 25 ರಷ್ಟು ಮಕ್ಕಳು ಹಸಿವಿನಿಂದ ಕಂಗೆಟ್ಟಿದ್ದಾರೆ ಎಂದು ಮಕ್ಕಳ ಕ್ಷೇಮಾಭ್ಯುದಯ ಸಂಘಟನೆ ಸಿರಿಯಾ ಮಕ್ಕಳ ಧಾರುಣ ಪರಿಸ್ಥಿತಿಯನ್ನು ತೆರೆದಿಟ್ಟಿದೆ. ಡಮಾಸ್ಕಸ್‌ನ ಮಡಾಯದಲ್ಲಿ ಹಸಿವಿನಿಂದ 25ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಇತ್ತೀಚೆಗೆ ವರದಿಯಾಗಿದೆ.