ಅಂತರಾಷ್ಟ್ರೀಯ

ವರ್ಷಾಂತ್ಯಕ್ಕೆ ಲಕ್ಷ ಜನರಿಗೆ ಜಿಕಾ ಸೋಂಕು! ಅಮೆರಿಕಾ ಪ್ರಾಂತದಲ್ಲಿ ಭಯಂಕರ ಪರಿಸ್ಥಿತಿ

Pinterest LinkedIn Tumblr

zika-virus

ಮಿಯಾಮಿ(ಅಮೆರಿಕಾ): ಕೆರೇಬಿಯನ್ ದ್ವೀಪ ಪಿರ್ಟೋರಿಕೊದಲ್ಲಿ ಈ ವರ್ಷಾಂತ್ಯಕ್ಕೆ ಜೀಕಾ ರೋಗಗಳು ಪೀಡಿತರ ಸಂಖ್ಯೆ 100,000 ದಾಟುವ ಸಂಭವ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಟಾಮ್ ಪ್ರಿಯೆಡನ್ ಹೇಳಿದ್ದಾರೆ.

`ಇತ್ತೀಚೆಗೆ ತಾನೇ ನಾನು ಪಿರ್ಟೋರಿಕೊಗೆ ಭೇಟಿ ಮಾಡಿ ಬಂದೆ. ಆ ಭಾಗದಲ್ಲಿ ಜೀಕಾ ರೋಗ ವ್ಯಾಪಕ ರೀತಿಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಜೀಕಾ ಪೀಡಿತರ ಸಂಖ್ಯೆ 100,000 ಸಂಖ್ಯೆ ದಾಟಲಿದೆ ಎಂದಿದ್ದಾರೆ.

ಸೊಳ್ಳೆಗಳಿಂದ ಹರಡುವ ಈ ರೋಗ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ ಗರ್ಭಧಾರಣೆ ಮಾಡುವವರು, ಗರ್ಭಧರಿಸುವುದನ್ನು ಮುಂದಕ್ಕೆ ಹಾಕಿಕೊಳ್ಳುವಂತೆ, ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಹಾಗೆಯೇ ಜೀಕಾ ರೋಗ ಹಬ್ಬಿರುವ ರಾಷ್ಟ್ರಗಳಿಗೆ, ಪ್ರದೇಶಗಳಿಗೆ ಹೋಗದಂತೆಯೂ ಗರ್ಭಿಣಿಯರಿಗೆ ಎಚ್ಚರಿಕೆ ನೀಡಲಾಗಿದೆ. ಕೆರೇಬಿಯನ್ ದ್ವೀಪ ಪಿಯರ್ಟೊರಿಕೊ ಪುಟ್ಟ ದ್ವೀಪವಾಗಿದ್ದು, 3.5 ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.

Write A Comment