ಅಂತರಾಷ್ಟ್ರೀಯ

81 ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನ ಹೈಜಾಕ್

Pinterest LinkedIn Tumblr

2222

ಕೈರೋ: ಅಲೆಗ್ಸಾಂಡ್ರಿಯಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ 81 ಮಂದಿ ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನವನ್ನು ಹೈಜಾಕ್ ಮಾಡಲಾಗಿದೆ.

ಅಲೆಂಗ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ ಏರ್ ಎ320 ವಿಮಾನವನ್ನು ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 8 ಗಂಟೆಗೆ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ವಿಮಾನವನ್ನು ಸೈಪ್ರಸ್ ನ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಏರ್‌ಲೈನ್ಸ್‌ನ ವಕ್ತಾರರು ಹೇಳಿದ್ದಾರೆ.

ವಿಮಾನ ಟೇಕಾಫ್ ಆದ ಒಂದು ಗಂಟೆಯೊಳಗೆ ದುಷ್ಕರ್ಮಿಗಳು ವಿಮಾನವನ್ನು ಹೈಜಾಕ್ ಮಾಡಿದ್ದು, ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ಸದ್ಯ ಬಾಂಬ್ ನಿಷ್ಕ್ರಿಯ ದಳ ಸೈಪ್ರಸ್ ಗೆ ತೆರಳಿದೆ.

ವಿಮಾನದಲ್ಲಿ ಓರ್ವ ಶಸ್ತ್ರಸರ್ಜಿತ ವ್ಯಕ್ತಿಗಳು ಹಾಗೂ ಬಾಂಬ್ ಇಟ್ಟಿರುವ ಬಗ್ಗೆ ಶಂಕಿಸಲಾಗಿದೆ.

ವಿಮಾನವನ್ನು ಹೈಜಾಕ್ ಮಾಡಿದ ಅಪಹರಣಕಾರರು 5 ವಿದೇಶಿಗರು ಹಾಗೂ ವಿಮಾನ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಿದ್ದಾರೆ.

Write A Comment