ಅಂತರಾಷ್ಟ್ರೀಯ

ಶ್ವಾನವೂ ಈಗ ಕೋ-ಪೈಲೆಟ್..!

Pinterest LinkedIn Tumblr

dog piolet

ಮಾನವನ ಮೇಲೆ ಹೆಚ್ಚಿನ ನಿಷ್ಠೆ ಇರುವ ಪ್ರಾಣಿ ಶ್ವಾನ ಎಂಬುದು ಜನಜನಿತ. ಸಾಕುಪ್ರಾಣಿಯಾಗಿ, ಪೊಲೀಸ್ ಇಲಾಖೆಯಲ್ಲಿ, ಸೇನೆಯಲ್ಲಿ.. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಶ್ವಾನಗಳ ಪಾತ್ರ ಇದ್ದೇ ಇದೆ. ಹಾಗಂತ, ನಾಯಿಯೊಂದು ವಿಮಾನದ ಸಹ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಲಂಡನ್​ನ ಎರಡೂವರೆ ವರ್ಷದ ‘ಶೇಡೋ’ ಎಂಬ ಶ್ವಾನ 30,000 ಅಡಿ ಎತ್ತರದಲ್ಲಿ ವಿಮಾನ ಚಲಾಯಿಸುವ ಮೂಲಕ ಜಗವೇ ನಿಬ್ಬೆರಗಾಗುವಂತೆ ಮಾಡಿದೆ. ವಿಶೇಷವೆಂದರೆ, ಲಂಡನ್​ನ ಬೀದಿಗಳಿಂದ ವಶಪಡಿಸಿಕೊಳ್ಳಲಾಗಿದ್ದ 1,20,000 ಅನಾಥ ನಾಯಿ ಮರಿಗಳಲ್ಲಿ ಇದೂ ಒಂದಂತೆ..!

ಶ್ವಾನಗಳಿಗೂ ಮನುಷ್ಯನಂತೆಯೇ ವಿವಿಧ ಕಾರ್ಯಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿದೆ. ಹಾಗಾಗಿ ಅವೂ ಸಹ ಯಾಕೆ ವಿಮಾನ ಚಲಾಯಿಸಬಾರದು ಎಂಬ ಪ್ರಶ್ನೆ ಉದ್ಭವಿಸಿದ್ದೇ ತಡ, ಮೂರು ಶ್ವಾನಗಳಿಗೆ ವಿಮಾನ ಚಾಲನೆ ತರಬೇತಿ ನೀಡುವ ಯೋಜನೆ ರೂಪಿಸಲಾಯಿತು. ಶ್ವಾನ ತರಬೇತುದಾರರು, ಪೈಲಟ್​ಗಳು, ವಿಜ್ಞಾನಿಗಳ ನೆರವಿನೊಂದಿಗೆ ತರಬೇತಿ ನೀಡಲಾಯಿತು. ಕೊನೆಗೂ ‘ಶೇಡೋ’ ವಿಮಾನ ಚಲಾಯಿಸಲು ಸಿದ್ಧವಾಯಿತು. ಇತ್ತೀಚೆಗೆ ಒಂದು ದಿನ ಪೈಲೆಟ್ ಆಡಂ ಜತೆ ವಿಮಾನ ಏರಿಯೇಬಿಟ್ಟಿತು. ಆತ ವಿಮಾನವನ್ನು ಟೇಕಾಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ‘ಶೇಡೋ’ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಮೊದಲ ಬಾರಿ ವಿಮಾನ ಚಲಾಯಿಸಿದ ಶ್ವಾನವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.

Write A Comment