ಮಾಸ್ಕೋ: ಪತ್ನಿಯೇ ಪತಿಯನ್ನು ಕೊಂದು ಆತನ ದೇಹವನ್ನು ಸಾಕಿದ ನಾಯಿಗೆ ತಿನ್ನಿಸಿರುವ ಘೋರ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಕಾಲಾ ಮಿಲ್ಲರ್ ನಿವಾಸಿ 46 ವರ್ಷದ ಬಾಟಕೋವಾ ಎಂಬಾಕೆ ತನ್ನ ಪತಿ 66 ವರ್ಷದ ಹಾನ್ಸ್‍ನನ್ನು ಚಾಕುವಿನಿಂದ ಇರಿದು ಕೊಲೆಗೈದು. ಆತನ ದೇಹದ ಕೆಲವೊಂದು ಭಾಗವನ್ನು ತೆಗೆದು ಅದನ್ನು ನಾಯಿಗೆ ತಿನ್ನಿಸಿದ್ದಾಳೆ.
ಮಾದಕ ವ್ಯಸನಿಯಾಗಿದ್ದ ಬಾಟಕೋವಾ, ಮಾತು ಬಾರದ ಗಂಡನನ್ನು ಕೊಲೆಗೈಯಲು ಇತ್ತೀಚೆಗೆ 50 ಸಾವಿರ ಯುರೋ( ಅಂದಾಜು 37 ಲಕ್ಷ ರೂ.) ಸುಪಾರಿ ಕೊಟ್ಟಿದ್ದಳಂತೆ. ಆದ್ರೆ ಕಳೆದ ವಾರ ಡ್ರಗ್ಸ್ ಅಮಲಿನಲ್ಲೇ ಗಂಡನನ್ನು ಕೊಲೆಮಾಡಿದ್ದಾಳೆ. ಸದ್ಯ ಬಾಟಕೋವಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.