ಅಂತರಾಷ್ಟ್ರೀಯ

ಮೂರು ದಿನ ಅವಶೇಷಗಳ ಅಡಿ ಬದುಕಿದ ಮಗು!

Pinterest LinkedIn Tumblr

NATION-81

ನೈರೋಬಿ: ಕುಸಿದ ಕಟ್ಟಡದ ಅವಶೇಷಗಳ ಕೆಳಗೆ ಸಿಲುಕಿದ್ದ ಒಂದು ವರ್ಷದ ಮಗು ಮೂರು ದಿನಗಳ ಕಾಲ ಜೀವ ಉಳಿಸಿಕೊಂಡಿದ್ದ ಅಪರೂಪದ ಘಟನೆ ಕೀನ್ಯಾದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ನೈರೋಬಿಯಲ್ಲಿ 6 ಮಹಡಿಯ ಕಟ್ಟವೊಂದು ಧರಾಶಾಯಿಯಾಗಿತ್ತು. ರಕ್ಷಣಾ ಕಾರ್ಯಾಚರಣೆ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಮೂರು ದಿನಗಳಿಂದ ಅವಶೇಷಗಳಡಿ ಸಿಲುಕಿಕೊಂಡಿದ್ದರೂ ಮಗು ಸುರಕ್ಷಿತವಾಗಿರುವುದು ಅಚ್ಚರಿ ಮೂಡಿಸಿದೆ. ಮಗು ನಿರ್ಜಲೀಕರಣದಿಂದ ಬಳಲುತ್ತಿದೆ. ಆದರೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಗುವಿನ ಆರೋಗ್ಯ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದ ಅವಶೇಷಗಳಿಂದ 21 ಮೃತದೇಹಗಳನ್ನು ಹೊರತೆಗೆಯಲಾಗಿದೆ.

Write A Comment