ಬಂಟ್ವಾಳ; ಗ್ರಾಮೀಣ ಪ್ರದೇಶದಲ್ಲಿಯೂ ಕಾಲೇಜು ಶಿಕ್ಷಣದ ಲಭ್ಯತೆಗಾಗಿ ಸರಕಾರ ಯೋಜನೆಗಳನ್ನು ರೂಪಿಸಿದೆ. ಸಿದ್ಧಕಟ್ಟೆ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸುವ ಚಿಂತನೆ ಸರಕಾರದ ಮುಂದಿದೆ. ಇದರಿಂದ ಪರಿಸರದವರಿಗೆ ಹೆಚ್ಚಿನ ಅನುಕೂಲತೆ ದೊರೆಯಲಿದೆ. ವಿದ್ಯಾರ್ಥಿಗಳ ನಾಯಕತ್ವದ ಅಭಿವೃದ್ಧಿಗೆ ವಿದ್ಯಾರ್ಥಿ ಸಂಘಗಳು ಅಗತ್ಯವಾಗಿದ್ದು ಆದರೆ ಪರಸ್ಪರ ಸ್ಪರ್ಧೆ, ದ್ವೇಷಕ್ಕೆ ಅದು ವೇದಿಕೆಯಾಗಬಾರದು ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಸೋಮವಾರ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಇಂದಿನ ಅಗತ್ಯ. ಅದಕ್ಕಾಗಿ ಗಣಮಟ್ಟದ ಕಾಲೇಜು ಶಿಕ್ಷಣ ಅಗತ್ಯವಾಗಿದ್ದು ಇದನ್ನು ಪೂರೈಸುವಲ್ಲಿ ಸರಕಾರ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲು ಬದ್ಧವಾಗಿದೆ ಎಂದರು.
ಕಾವೂರು ಸ.ಪ್ರ.ದ.ಕಾಲೇಜು ಉಪನ್ಯಾಸಕ ಡಾ|ಶ್ರೀಧರ ಮಣಿಯಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ| ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಎನ್.ಪದ್ಮನಾಭ ರೈ , ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಲೋಕೇಶ ಶೆಟ್ಟಿ , ವಿದ್ಯಾರ್ಥಿಪಾಲನಾ ಮೇಲ್ವಿಚಾರಕಿ, ಉಪನ್ಯಾಸಕಿ ನಸೀಮಾ ಬೇಗಂ, ಪ್ರೌಢ ಶಾಲಾ ಮುಖ್ಯಶಿಕ್ಷಕ ರಮಾನಂದ, ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಾನಂದ ರೈ , ಅಶೋಕ ಆಚಾರ್ಯ, ಸೀತಾರಾಮ ಶೆಟ್ಟಿ , ಮಧ್ವರಾಜ್ ಜೈನ್, ಜಯಕರ ಶೆಟ್ಟಿ , ದಿನೇಶ್ ಶೆಟ್ಟಿಗಾರ್, ಗಣೇಶ್‌ನಾಯಕ್ ಕರ್ಪೆ, ಎಸ್.ಎಂ.ಹುಸೇನ್, ಸ.ಪ.ಪೂ.ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಪ್ರಭು, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಪನ್ಯಾಸಕರಾದ ವಿದ್ಯಾಧರ ಹೆಗ್ಡೆ , ಪ್ರಸನ್ನ ಕುಮಾರ್, ಸೌಮ್ಯ , ಗ್ರಂಥಪಾಲಕ ಶ್ರೀನಿವಾಸ್, ಶಿಕ್ಷಕ ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಸುದರ್ಶನ್ ಸ್ವಾಗತಿಸಿದರು. ಕಾರ್ಯದರ್ಶಿ ದಿವ್ಯಜ್ಯೋತಿ ಡಿಕೋಸ್ತ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.