ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ನೆರೆಹಾವಳಿಗೆ ಸಿಲುಕಿ ಸಂತ್ರಸ್ತರಾದವರಿಗೆ ಬಂಟ್ವಾಳ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸ್ವಯಂ ಸೇವಕರು, ಸಂಘ ಪರಿವಾರದ ಕಾರ್ಯಕರ್ತರು, ಬಿಜೆಪಿ ಮುಖಂಡರು ಸೋಮವಾರ ಬಿ.ಸಿ.ರೋಡ್,ಬಂಟ್ವಾಳದಲ್ಲಿ ಪರಿಹಾರ ನಿಧಿ ಸಂಗ್ರಹಿಸಿದರು.
ಕೈಕಂಬದಿಂದ ಬಿ.ಸಿ.ರೋಡ್,ಬಂಟ್ವಾಳ ಪೇಟೆಯಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ನಿಧಿ ಸಂಗ್ರಹಿಸಿದರು.ಸಂಸದ ನಳಿನ್ ಕುಮಾರ್ ಕಟೀಲ್, ತಾ.ಪಂ.ಅಧ್ಯಕ್ಷ ಯಶವಂತ.ಡಿ, ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು,ಪದ್ಮನಾಭ ಕೊಟ್ಟಾರಿ,ಜಿ.ಆನಂದ,ರಾಮ್‌ದಾಸ್ ಬಂಟ್ವಾಳ,ಪುರುಷ ಎನ್.ಸಾಲಿಯಾನ್ ನೆತ್ತರಕೆರೆ, ಸುಲೋಚನಾ, ಜಿ.ಕೆ.ಭಟ್, ರೊನಾಲ್ಡ್ ಡಿ’ಸೋಜ, ಮಹಾಬಲ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ದಿನೇಶ್ ಅಮ್ಟೂರು, ಪುರುಷ ಸಾಲಿಯಾನ್ ನರಿಕೊಂಬು, ಗೋಪಾ ಸುವರ್ಣ, ಶ್ರೀನಿವಾಸ್ ಮಲ್ಲಿ, ಭಾಸ್ಕರ ಟೈಲರ್, ಮಚ್ಚೇಂದ್ರ ಸಾಲಿಯಾನ್, ಪ್ರಕಾಶ್ ಅಂಚನ್ ಹಾಗೂ ಆರ್.ಎಸ್. ಎಸ್. ಮತ್ತು ಪರಿವಾರ ಸಂಘಟನೆಯ ಮುಖಂಡರಾದ ಸರಪಾಡಿ ಅಶೋಕ್ ಶೆಟ್ಟಿ,ರವಿರಾಜ್ ಬಿ.ಸಿ.ರೋಡ್,ದಾಮೋದರ ನೆತ್ತರಕೆರೆ,ಗುರುರಾಜ್ ಬಂಟ್ವಾಳ,ಅಜಯ್ ಕೊಂಬ್ರಬೈಲ್,ಪದ್ಮನಾಭ,ರಮಾನಾಥ ರಾಯಿ, ವೆಂಕಟರಮಣ ಭಟ್ ಮೊದಲಾದವರು ಭಾಗವಹಿಸಿದ್ದರು.