ಉಡುಪಿ : ಶ್ರೀಕೃಷ್ಣನ ಜನ್ಮದಿನವನ್ನು ಸ್ಮರಿಸುವ ಶ್ರೀಕೃಷ್ಣಾಷ್ಟಮಿಯನ್ನು ಇಂದು ಉಡುಪಿಯಲ್ಲಿ ಉಪವಾಸ ಮತ್ತು ವಿಶೇಷ ಅಲಂಕಾರದೊಂದಿಗೆ ಆಚರಿಸಲಾಯಿತು.
ಏಕಾದಶಿಯಂತೆ ಬೆಳಗ್ಗೆ ಬೇಗ ಪೂಜೆಯನ್ನು ನಡೆಸಿದ ಬಳಿಕ ಪರ್ಯಾಯ ಶ್ರೀಪಾದರು ಶ್ರೀಕೃಷ್ಣನಿಗೆ ರಾತ್ರಿ ಪೂಜೆಯ ಬಳಿಕ ನಿವೇದಿಸಲು ಸ್ವತಃ ಲಡ್ಡುಗಳನ್ನು ಕಟ್ಟಿ ಲಡ್ಡು ಕಟ್ಟುವುದಕ್ಕೆ ಚಾಲನೆ ನೀಡಲಿರುವರು. ಇಂದು ದಿನವಿಡೀ ಹೆಸರಾಂತ ಭಜನಾ ತಂಡದವರಿಂದ ಭಜನೆ ನಡೆಯಲಿದೆ. ಮಧ್ಯರಾತ್ರಿ 12.36ಕ್ಕೆ ಚಂದ್ರೋದಯದ ಹೊತ್ತಿಗೆ ಶ್ರೀಕೃಷ್ಣಾರ್ಘ್ಯ ಪ್ರದಾನ ನಡೆಯಲಿದೆ.
ಉಡುಪಿ ಹೊರತುಪಡಿಸಿ ಕೆಲವೆಡೆ ಸೋಮವಾರ ಅಷ್ಟಮಿ ಆಚರಣೆ ನಡೆದಿದೆ. ಕಾಸರಗೋಡು ಸಹಿತ ಕೇರಳದಲ್ಲಿ ದೃಗ್ಗಣಿತ ಪಂಚಾಂಗದಂತೆ ಸೋಮವಾರ ಅಷ್ಟಮಿ ಆಚರಣೆ ನಡೆದಿದೆ.
ನಾಳೆ ವಿಟ್ಲಪಿಂಡಿ :
ಬುಧವಾರ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದೆ. ಬೆಳಗ್ಗೆ ಬೇಗ ದ್ವಾದಶಿಯಂತೆ ಪೂಜೆ ನಡೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3ಕ್ಕೆ ವೈಭವದ ವಿಟ್ಲಪಿಂಡಿ ಉತ್ಸವ ರಥಬೀದಿಯಲ್ಲಿ ನಡೆಯಲಿದೆ.