ಕರಾವಳಿ

ವಿಶ್ವ ತುಳುವೆರೆ ಪರ್ಬ 2014 ಕವಿ ಗೋಷ್ಠಿಗೆ ಕವನಗಳ ಅಹ್ವಾನ.

Pinterest LinkedIn Tumblr

TULU_VERA_PRBHA_1

ಮಂಗಳೂರು,ಸೆ.19 : ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಸಲುವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮೆಯ ಸಹಯೋಗದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ ವೀರೇಂದ್ರ ಹೆಗೆಡ್ಡೆ ಅವರ ಗೌರವಾಧ್ಯಕ್ಷತೆಯಲ್ಲಿ ವಿಶ್ವ ತುಳುವೆರೆ ಪರ್ಬ 2014  ಕಾರ್ಯಕ್ರ್ಮವು ದಶಂಬರ ತಿಂಗಳ 12,13,14 ರಂದು ಮಂಗಳೂರಿನ ಅಡ್ಯಾರ್ ನಲ್ಲಿರುವ ಪ್ರತಿಷ್ಠಿತ್ಯ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಅವರಣದಲ್ಲಿ ನಡೆಯಲಿದೆ. ಈ ಪರ್ಬದಲ್ಲಿ ನಡೆಯುವ ಕವಿ ಗೋಷ್ಠಿಯಲ್ಲಿ ಭಾಗವಹಿಸಲು ಹಿರಿಯ ಕಿರಿಯ ಮತ್ತು ಉದಯೋನ್ಮುಳ ಕವಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಕವಿಗಳು ತಮ್ಮ ಕವನಗಳನ್ನು ಅಕ್ಟೋಬರ್ 15,2014 ರ ಒಳಗಾಗಿ ಕಳುಹಿಸಿ ಕೊಡಬೇಕು ಕವನಗಳು ತುಳು ಸಾಹಿತ್ಯ ಸಂಸ್ಕೃತಿಯನ್ನು ಒಳಗೊಂಡಿರಬೇಕು. ಕವನಗಳನ್ನು ಅಯ್ಕೆ ಮಾಡಲು ಸಮಿತಿಯೊಂದಿದ್ದು ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ. ಅಯ್ಕೆಯಾದ ಕವನಗಳನ್ನು ಪರ್ಬದ ಗೋಷ್ಠಿಯಲ್ಲಿ ಓದಲು ಅವಕಾಶವಿದ್ದು ಉಳಿದ ಕವನಗಳನ್ನು ಕೃತಿಯ ರೂಪದಲ್ಲಿ ಪ್ರಕಟಿಸಾಗುವುದು.

ಕವನಗಳನ್ನು ಕಳುಹಿಸಬೇಕಾದ ವಿಳಾಸ:
ಡಾ.ಕಿಶೋರ್ ಕುಮಾರ್ ರೈ ಶೇಣಿ, ಸಂಚಾಲಕರು, ಸಾಹಿತ್ಯ ಗೋಷ್ಠಿ/ ಕವಿ ಗೋಷ್ಠಿ ವಿಭಾಗ , ವಿಶ್ವ ತುಳುವರೆ ಪರ್ಬ ಕಛೇರಿ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ), ಉರ್ವಸ್ಟೋರ್ ಅಂಚೆ . ಅಶೋಕ ನಗರ , ಮಂಗಳೂರು – 575,    cell no : 9449592380 / 8951369464  ,Email : tuluparbha@gmail.com, Web Site : www.vishwatuluparbha.in.

Write A Comment