ಮಂಗಳೂರು ಸೆಪ್ಟೆಂಬರ್,19: ಗೌರವಾನ್ವಿತ ರಾಷ್ಟ್ರಪತಿಯವರು ಸೆ.21 ರಂದು ಮಂಗಳೂರಿಗೆ ಆಗಮಿಸಲಿರುವುದರಿಂದ ಹಾಗೂ ಗೌರವಾನ್ವಿತರು ತಂಗುವ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಾರ್ವಜನಿಕ ಹಿತದೃಷ್ಠಿಯಿಂದ, ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ,ಎ.ಬಿ.ಇಬ್ರಾಹಿಂ ಐಎಎಸ್.ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಕ್ಷಿಣಕನ್ನಡ ಜಿಲ್ಲೆ ಇವರು ಸೆ.21 ರಂದು ಬೆಳಿಗ್ಗೆ 6 ಗಂಟೆಯಿಂದ ಸೆ.22 ರ ಬೆಳಿಗ್ಗೆ 6 ಗಂಟೆಯ ವರೆಗೆ ಮಂಗಳೂರು ಸರ್ಕ್ಯೂಟ್ ಹೌಸ್‌ನ ಆವರಣದಲ್ಲಿರುವ ಗಜಲಿ ಬಾರ್ ಅಂಡ್ ರೆಸ್ಟೋರೆಂಟ್‌ನ್ನು ಮುಚ್ಚಲು ಆದೇಶಿಸಿ, ಅಧಿಸೂಚನೆ ಹೊರಡಿಸಿರುತ್ತಾರೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರಾವಳಿ