ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆಯಡಿ ಹತ್ತುವರ್ಷಗಳ ಹಿಂದೆಯೇ ಜನಧನ್ ಯೋಜನೆ ಜ್ಯಾರಿ : ಡಾ. ಡಿ.ವಿರೇಂದ್ರ ಹೆಗ್ಗಡೆ

Pinterest LinkedIn Tumblr

Pragati_bandu_heggade

ಬಂಟ್ವಾಳ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಜನಧನ್ ಯೋಜನೆಯನ್ನು ಹತ್ತುವರ್ಷಗಳ ಹಿಂದೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಬ್ಯಾಂಕು ಖಾತೆ ಹೊಂದುವ ಅವಕಾಶ ಮಾಡಿಕೊಟ್ಟಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.

ಬಂಟ್ವಾಳದ ಎಸ್‌ಡಿ‌ಎಂ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿಯ ಯೋಜನೆಯ ಬಂಟ್ವಾಳ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಾರ್ಗದರ್ಶನದ ಕೊರೆತೆಯಿಂದಾಗಿ ಈ ಹಿಂದೆ ಕೃಷಿ ಪದ್ದತಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಪ್ರಗತಿಬಂಧು ಯೋಜನೆಯ ಮೂಲಕ ರೈತರು ಕೃಷಿ ಸಂಬಂಧಿ ಮಾಹಿತಿ ಹಾಗೂ ಮರ್ಗದರ್ಶನವನ್ನು ಪಡೆದು ಕೇವಲ ಕೃಷಿಯನ್ನು ಅವಲಂಬಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಮದು ಅವರು ಮುಂದಿನ ತಿಂಗಳು ಕೃಷಿ ಚಟುವಟಿಕೆಗೆ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಕೃಷಿಕನಿಗೆ ನೀಡುವ ಯೋಜನೆ ಜಾರಿಗೆ ಬರಲಿದೆ ಎಂದರು.

ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಮಾಹಿತಿಯ ಕೊರತೆಯಿಂದ ಜನರಿಗೆ ತಲುಪುತ್ತಿಲ್ಲ. ಸರ್ಕಾರದ ಇಂತಹ ಯೋಜನೆಗಳನ್ನು ಜನರೇ ಕೇಳಿ ಪಡೆದುಕೊಳ್ಳಬೇಕು ಎಂದು ತಿಳಿಸಿದ ಡಾ.ಹೆಗ್ಗಡೆ ಬಂಟ್ವಾಳ ತಾಲೂಕಿನಲ್ಲಿ 88.61 ಕೋಟಿ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದ್ದು ಮರು ಪಾವತಿಗೆ ಕೇವಲ 1.15ಲಕ್ಷ ಮಾತ್ರ ಬಾಕಿ ಉಳಿದಿರುವುದು ಇಲ್ಲಿನ ಒಕ್ಕೂಟದ ಸಮರ್ಥ ಕಾರ್ಯವೈಖರಿಗೆ ಸಾಕ್ಷಿ ಎಮದು ಶ್ಲಾಘನೆ ವ್ಯಕ್ತ ಪಡಿಸಿದರು. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 16.33 ಕೋಟಿ ರುಪಾಯಿ ಉಳಿತಾಯವಾಗಿರುವುದು ಅಭಿನಂದನೀಯವಾಗಿದೆ. ಯೋಜನೆಯನ್ನು ಅರ್ಥೈಸಿಕೊಂಡು ಸಹಜ ಸ್ವಭಾವದೊಂದಿಗೆ ಕಾರ್ಯಕ್ರಮವನ್ನು ಅನುಷ್ಠಾನಗೊಂಡಿದೆ ಎಂದರು.

ಜಿಲ್ಲಾ ಉಸ್ತುವರಿ ಸಚಿವ ಬಿ.ರಮನಾಥ ರೈ ಸಭಾದ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ಕಾಲದಲಲಿ ಭೂ ಮಸೂದೆ ಕಾನೂನಿನ ಮೂಲಕ ಸಮಾಜದಲ್ಲಿ ಬದಲಾವಣೆಯಾಗಿದ್ದರೆ ಪ್ರಸ್ತುತ ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆಯಯ ಮೂಲಕ ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ಪರಿವರ್ತನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬಂಟ್ವಾಳ ಪುರಸಭಾಧ್ಯಕ್ಷೆ ವಸಂತಿ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಿರಣ್ ಹೆಗ್ಡೆ, ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು. ಇದೇ ವೇಳೆ ವಿವಿಧ ಯೋಜನೆಗೆ ಫಲಾನುಭವಿಗಳಿಗೆ ಅನುದಾನವನ್ನು ವಿತರಿಸಲಾಯಿತು.

ಒಕ್ಕೂಟದ ನಿಕಟಪೂರ್ವಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು, ನೂತನ ಅಧ್ಯಕ್ಷ ಚಂದಪ್ಪ ಮೂಲ್ಯ ಸಹಕಾರ ಯಾಚಿಸಿದರು. ವಲಯಾದ್ಯಕ್ಷರುಗಳಾದ ನಾಗೇಶ ಭಂಡಾರಿ, ಮಾಧವ, ಆನಂದ, ವೆಂಕಟರಾಯ ಪ್ರಭು, ಜಯಕರ, ಚಂದ್ರಹಾಸ, ಪುಷ್ಪರಾಜ, ರಾಧಕೃಷ್ಣ, ವಿಠಲನಾಯ್ಕ್ ಯೋಜನೆಯ ಪ್ರಾದೇಶಿಕ ನಿದೇರ್ಶಕ ಕೆ.ಮಹಾವೀರ ಅಜ್ರಿ, ಕೊಡಗು ಜಿಲ್ಲಾ ನಿರ್ದೇಶಕ ಸೀತರಾಮ ಶೆಟ್ಟಿ ವೇದಿಕೆಯಲ್ಲಿದ್ದರು. ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ವರದಿ ವಾಚಿಸಿದರು. ವಿಟ್ಲ ವಲಯ ಅಧ್ಯಕ್ಷ ರಾಧಕೃಷ್ಣ ಸ್ವಾಗತಿಸಿ, ತುಂಬೆ ವಲಯ ಅಧ್ಯಕ್ಷ ಮಾಧವ ವಂದಿಸಿದರು. ಬಂಟ್ವಾಳ ವಲಯ ಮೇಲ್ವಿಚಾರಕಿ ಅಮಿತ ಹಾಗೂ ವಗ್ಗ ವಲಯ ಮೇಲ್ವಿಚಾರಕ ವಸಂತ ಸಾಲ್ಯಾನ್ ನಿರೂಪಿಸಿದರು.

Write A Comment