ಮಂಗಳೂರು ಸೆ.೨೨ : ಬೋಳಾರ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ನಿ., ಇದರ ತೃತೀಯ ವಾರ್ಷಿಕ ಸಾಮಾನ್ಯ ಸಭೆಯು ಮಂಗಳಾದೇವಿ ದೇವಸ್ಥಾನದ ಎದುರುಗಡೆ ಇರುವ ಕಾಂತಿ ಚರ್ಚ್‌ನ ಸಭಾಭವನದಲ್ಲಿ ಜರುಗಿತು.
ಸಹಕಾರಿಯ ಅಧ್ಯಕ್ಷರಾದ ಶ್ರೀ ಗುರುಪ್ರವೀಣ್‌ರವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸೋಮನಾಥ್‌ರವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸಹಕಾರಿಯ ಲೆಕ್ಕ ಪರಿಶೋಧಕರಾದ ಸಿ.ಎ. ಶಾಂತರಾಮ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ರಮಾನಂದ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಕವಿತ ಹಾಗೂ ಸಹಕಾರಿಯ ಹಿರಿಯ ಸದಸ್ಯರಾದ ಶ್ರೀ ಅಶೋಕ್, ಶ್ರೀ ಎಂ. ಶ್ರೀನಿವಾಸ್ ರಾವ್, ಶ್ರೀಮತಿ ಮಾಲತಿ ಸಿ.ಕೆ. ಇವರನ್ನು ಸನ್ಮಾನಿಸಲಾಯಿತು.
ಸಹಕಾರಿಯು ವರದಿ ಸಾಲಿನಲ್ಲಿ ೪.೨೮ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ೧೨% ಡಿವಿಡೆಂಡ್ ಘೋಷಿಸಲಾಯಿತು. ಉಪಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ, ನಿರ್ದೇಶಕರುಗಳಾದ ಶ್ರೀ ರಮಾನಂದ ಪೂಜಾರಿ, ಶ್ರೀ ಹರೀಶ್ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಸುಜೀತ್ ಕುಮಾರ್, ಶ್ರೀ ಸಂದೀಪ್ ಉಳ್ಳಾಲ್, ಶ್ರೀ ಮನೀಶ್ ರಾಜ್, ಶ್ರೀ ರೋನಾಲ್ಡ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.