ಉಡುಪಿ: ಉಡುಪಿ ತಾಲೂಕು ಇನ್ನಂಜೆ ನಿವಾಸಿ ಆರ್ಥರ್ ಡಾಂಗ್ಲಸ್ ಬಾರ್ಬೋಜಾ ಸೆ.20ರಂದು ಕುವೈಟ್‌ನಲ್ಲಿ ಮತಪಟ್ಟಿರುವುದಾಗಿ ಕುವೈಟ್ ರಾಯಭಾರ ಕಚೇರಿ ಕರ್ನಾಟಕ ರಾಜ್ಯ ಸರಕಾರದ ಎನ್‌ಆರ್‌ಐ ಪೋರಂಗೆ ಸೋಮವಾರ ಸಂದೇಶ ರವಾನಿಸಿದೆ.
ಇನ್ನಂಜೆಯ ಶಂಕರಪುರ ನಿವಾಸಿಯಾಗಿರುವ ಇವರು ಜಾನ್ ಬಾರ್ಬೋಜಾ ಮತ್ತು ಡುಲ್ಸಿನ್ ರೊಡ್ರಿಗಸ್ ಅವರ ಪುತ್ರ. ಸಾವಿನ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕುವೈಟ್‌ನ ಶವಾಗಾರದಲ್ಲಿ ಮ್ರತದೇಹ ಇರಿಸಲಾಗಿದ್ದು ಮತದೇಹ ಸ್ವದೇಶಕ್ಕೆ ಕೊಂಡೊಯ್ಯುವ ಅಥವಾ ಕುವೈಟ್‌ನಲ್ಲಿ ಅಂತ್ಯವಿಧಿ ನೆರವೇರಿಸುವ ಬಗ್ಗೆ ಮಾಹಿತಿ ನೀಡುವಂತೆ ರಾಯಭಾರ ಕಚೇರಿ ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿರುವ ಎನ್‌ಆರ್‌ಐ ಪೋರಂಗೆ ಸಂದೇಶ ರವಾನಿಸಿದೆ.
ಎನ್‌ಆರ್‌ಐ ಪೋರಂನ ಆನಂದ ಮಿರ್ಜಿ ಕುಂದಾಪುರ ಸಹಾಯಕ ಕಮಿಷನರ್ ಯೋಗೇಶ್ವರ ಮೂಲಕ ಕುಟುಂಬಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಕುವೈಟ್‌ನಲ್ಲಿ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ತಲುಪಿಸಲಾಗಿದೆ.