ಕುಂದಾಪುರ: ಕೋಟತಟ್ಟು ಗ್ರಾ.ಪಂ ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಇದರ ಸಂಯುಕ್ತ ಆಶ್ರಯದಲ್ಲಿ , ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ದಶಮಾನೋತ್ಸವದ ಅಂಗವಾಗಿ, ಅ.1ರಿಂದ ಅ.31 ರವರೆಗೆ ಕೋಟ ಕಾರಂತ ಕಲಾಭವನದಲ್ಲಿ ನಿರಂತರ ಒಂದು ತಿಂಗಳ ಕಾಲ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು ಮಾಹಿತಿ ನೀಡಿದರು.
ಅ.1 ರಂದು ಬೆಳಿಗ್ಗೆ 10ಗಂಟೆಗೆ ಮಕ್ಕಳ ಸಾಹಿತ್ಯ ಸಮ್ಮೇಳನ ಚಿಲುಮೆ ಹಾಗೂ ಅ.2 ಬೆಳಿಗ್ಗೆ 10ಕ್ಕೆ ಮಕ್ಕಳ ಕಿರು ನಾಟಕೋತ್ಸವ ಚಿತ್ತಾರ, ಅ. 3 ಬೆಳಿಗ್ಗೆ 10ಕ್ಕೆ ವಲಯ ಮಟ್ಟದ ಚುಟುಕು ಸಮ್ಮೇಳನ ಕಿನ್ನರಿ, ಅ.4 ಬೆಳಿಗ್ಗೆ 10 ಕ್ಕೆ ಯಕ್ಷಗಾನ ಸಮಾವೇಶ ಒಡ್ಡೋಲಗ ಮತ್ತು ಅ. 5 ೫ರಂದು ಮದ್ಯಾಹ್ನ 2.30ಕ್ಕೆ ವೈದ್ಯ ಸಾಹಿತಿಗಳ ಸಾಹಿತ್ಯ ಸಮ್ಮೇಳನ ಆಪ್ತ, ಅ.6ರ ಮದ್ಯಾಹ್ನ 2 ಕ್ಕೆ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಾಗಾರ ಚೇತನ, ಅ. 7 ಕ್ಕೆ ಪಂಚಾಯತ್ ಹಬ್ಬ ಸುರಾಜ್ಯ ಕಾರ್ಯಕ್ರಮ, ಅ. 8 ರ ಬೆಳಿಗ್ಗೆ 10 ಕ್ಕೆ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘ, ಬ್ರಹ್ಮಾವರ ವಲಯ ಛಾಯಾಗ್ರಾಹಕರ ಸಂಘ ಆಶ್ರಯದಲ್ಲಿ ಪತ್ರಿಕಾ ತರಬೇತಿ ಕಾರ್ಯಾಗಾರ ನುಡಿ ಮತ್ತು ಅಕ್ಟೋಬರ್ 9 ಬೆಳಿಗ್ಗೆ 10ಕ್ಕೆ ಸಂಗೀತ ಸಮ್ಮೇಳನ ನಿನಾದ ಜರುಗಲಿದೆ.
ಅ.10 ರ ಮದ್ಯಾಹ್ನ 3 ಕ್ಕೆ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕವಿ,ಸಾಹಿತಿ ಜಯಂತ್ ಕಾಯ್ಕಿಣಿ ಯವರಿಗೆ ಕಾರಂತ ಹುಟ್ಟೂರು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅ.11 ರಂದು ರಾಜ್ಯ ಮಟ್ಟದ ಚಲನ ಚಿತ್ರೋತ್ಸವ ನಡೆಯಲಿದ್ದು, ಅ.12 ರಿಂದ 20 ರವರೆಗೆ ಸಂಜೆ 4 ಕ್ಕೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸಭಾ ಕಾರ್ಯಕ್ರಮ ಮತ್ತು ಚಿತ್ರ ಪ್ರದರ್ಶನ ನಡೆಯಲಿದೆ.
ಅ.21 ರಂದು ಬೆಳಿಗ್ಗೆ 10 ಕ್ಕೆ ಬೌದ್ಧಿಕ ತರಬೇತಿ ಕಾರ್ಯಾಗಾರ, ಪಿರಮಿಡ್ ಧ್ಯಾನ ಶಿಬಿರ, ಪ್ರಕೃತಿ ಆಹಾರ ಪದ್ಧತಿ, ಕಾರಂತ ಕೃತಿ ರಸಗ್ರಹಣ ಶಿಬಿರಗಳು ನಡೆಯಲಿದೆ. ಆ.22,23,24 ರಂದು ಕಾರಂತರ ಕುರಿತು ವಿವಿಧ ಕಾರ್ಯಕ್ರಮಗಳು ಹಾಗೂ ಅ.25 ರಂದು ಬೆಳಿಗ್ಗೆ 10 ಕ್ಕೆ ಮಕ್ಕಳ ಗ್ರಾಮ ಸಭೆ, ಅ. 26 ಬೆಳಿಗ್ಗೆ 10 ಕ್ಕೆ ಉಚಿತ ಹೀಲಿಂಗ್, ಪ್ರಕೃತಿ ಚಿಕಿತ್ಸಾ ಶಿಬಿರ, ಅ.27 ಮತ್ತು ಅ. 28 ರಂದು ಕಾರಂತರ ಕುರಿತು ವಿವಿಧ ಕಾರ್ಯಕ್ರಮಗಳು ಮತ್ತು ಅ.29 ರಂದು ಬೆಳಿಗ್ಗೆ 10 ಕ್ಕೆ ಆಹ್ವಾನಿತ ಅಂಗನವಾಡಿಗಳ ನಡುವೆ ವೈವಿಧ್ಯಮಯ ಕಾರ್ಯಕ್ರಮ ಸ್ಪರ್ಧೆ ಚಿಣ್ಣರ ಚೇತನ, ಅ.30 ಬೆಳಿಗ್ಗೆ 10 ಕ್ಕೆ ಆಹ್ವಾನಿತ ಶಿಶುಮಂದಿರಗಳ ನಡುವೆ ವೈವಿಧ್ಯಮಯ ಕಾರ್ಯಕ್ರಮ ಸ್ಪರ್ಧೆಚಿಣ್ಣರ ಜಗುಲಿ,ಅ.31 ರ ಸಂಜೆ 5 ಕ್ಕೆ ನೆನಪುಗಳ ಮೆರವಣಿಗೆ ಮತ್ತು ನಾಟಕ ಪ್ರದರ್ಶನ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಮುಖ್ಯಸ್ಥರಾದ ನರೇಂದ್ರ ಕುಮಾರ್ ಕೋಟ, ರಾಜ ಚಿತ್ರಪಾಡಿ, ಸತೀಶ್ ಕುಮಾರ್ ವಡ್ಡರ್ಸೆ, ಕೋಟ ಗ್ರಾ.ಪಂ ಪಿ.ಡಿ.ಒ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.