ಕುಂದಾಪುರ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷ,ಕೋಟಿಗಟ್ಟಲೆ ಬೆಲಬಾಳುವ ಎರಡು ತಲೆಯ ಹಾವಾಯ್ತು, ನಕ್ಷತ್ರ ಆಮೆಯಾಯ್ತು ಫುರಾತನ ಮಂದಿರ ಗೋಪುರಗಳ ಹಿತ್ತಾಳೆಯ ಕಲಶವಾಯ್ತು, ಸೂರ್ಯ ಮಾರ್ಕಿನ ಹಳೆಯ ಇಪ್ಪತ್ತು ಪೈಸೆಯ ನಾಣ್ಯವಾಯ್ತು ಇದೀಗ ಅದೇ ಸಾಲಿನಲ್ಲಿ ಪುರಾತನ ಜರ್ಮನಿ ನಿರ್ಮಿತ ಪೆಟ್ರೋ ಮ್ಯಾಕ್ಸ್ ದೀಪ ( ಗ್ಯಾಸ್ ಲೈಟ್) ಬಂದು ಕುಳಿತು ಕುಂದಾಪುರ ವಿಡಿ ವಿಚಿತ್ರ ಸಂಚಲನವನ್ನು ಸೃಷ್ಟಿಸಿ ಬಿಟ್ಟಿದೆ.
ಮಂಗಳವಾರ ಸಂಜೆಯಷ್ಟೇ ಕುಂದಾಪುರದ ಪೋಲಿಸರು 1821 ರಲ್ಲಿ ಜರ್ಮನಿಯಲ್ಲಿ ನಿರ್ಮಿತ ವಾದಂತಹ ಗ್ಯಾಸ್ ಲೈಟೊಂದನ್ನು ಅದೃಷ್ಟದ ದೀಪವೆಂದು ನಂಬಿಸಿ ಸ್ಥಳೀಯ ಫೆರಿ ರಸ್ತೆಯಲ್ಲಿ ಮಾರಾಟ ಮಾಡಲು ಗಿರಾಕಿಗಳನ್ನು ಹೊಂಚು ಹಾಕುತ್ತಿದ್ದರು ಏಂಬ ಆರೋಪದ ಮೇರೆಗೆ ಸಾಗರದ ಲಕ್ಷ್ಮೀದತ್ತ, ರಾಘವೇಂದ್ರ ಭಂಡಾರಿ ಸೇರಿದಂತೆ ಕುಂದಾಪುರದ ಮನೋಜ್ ಎಂಬ ವರನ್ನು ವಶಕ್ಕೆ ಪಡೆದುಕೋಂಡಿದ್ದರು.
ಅರೆ..ಕೇವಲ ಗ್ಯಾಸ್ ಲೈಟೊಂದನ್ನು ಮಾರಾಟ ಮಾಡಿದರೆ ಇದ್ಯಾವ ಪರಿಯ ಕ್ರೈಮ್ ಎಂದು ತಲೆ ಕೆಡಿಸಿ ಕೊಂಡರೆ ಕೇಳಿ ಬರುವ ಸಂಗತಿ ರೋಚಕವಾಗಿದೆ ಅದೇನಪ್ಪಾ ಎಂದರೆ ಈ ಗ್ಯಾಸ್ ಲೈಟಿನ ಸೀಮೆ ಎಣ್ಣೆ ತುಂಬು ಜಾಗದಲ್ಲಿ ನೀರನ್ನು ತುಂಬಿ ಅದು ಉಕ್ಕಿ ಬಂದರೆ ಇದನ್ನು ಪಡಕೊಂಡವನ ಅದೃಷ್ಟ ಏಕ್ ದಮ್ ಖುಲಾಯಿಸಿ ಬಿಡುತ್ತದೆಯಂತೆ ಆತ ಮುಟಿದೆಲ್ಲವೂ ಚಿನ್ನ ವಾಗುತ್ತದೆಯಂತೆ ಭಾರತದಲ್ಲಿ ಲಕ್ಷಾಂತರ ಮೌಲ್ಯಗಳಲ್ಲಿ ಬೆಲೆ ಬಾಳುವ ಈ ಹಿತ್ತಾಳೆಯ ಗ್ಯಾಸ್ ಲೈಟ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿಗಳ್ಲಿ ಬಿಕರಿ ಯಾಗುತ್ತದೆಯಂತೆ.
ಅದರಲ್ಲೂ ಈಸ್ಟ್ ಇಂಡಿಯಾ ನಿರ್ಮಿತ ಇಂತಹ ಪೆಟ್ರೋಮ್ಯಾಕ್ಸ ಗೆ ಬೆಲೆ ಕಟ್ಟವುದೇ ಅಸಾಧ್ಯ ವೆಂಬ ಮಾತುಗಳು ಒಂದೇ ಸಮನೆ ಸುಳಿದಾಡತೊಡಗಿವೆ. ಆದರೆ ಅದೃಷ್ಟವೆಂಬುವುದು ನಿಜಕ್ಕೂ ಖುಲಾಯಿಸುವ ಸಂಭವವಿದ್ದಿದ್ದರೆ ಇದನ್ಯಾಕಪ್ಪಾ ಆರೋಪಿಗಳು ಮಾರುತ್ತಿದ್ದರು ಎಂದು ಯೋಚಿಸಲೂ ಪರುಸೊತ್ತಿಲ್ಲದಂತೆ ಕುಂದಾಪರದಂತಹ ಕುಂದಾಪುರವೇ ಹಳೆಯ ಗ್ಯಾಸ್ ಲೈಟ್ ಗಳನ್ನು ತಡಕಾಡಲಾರಂಭಿಸಿದೆ. ಇದರ ಬಿಸಿ ಗುಜರಿ ಅಂಗಡಿಯವರಿಗೂ ತಗಲಿದ್ದು, ಹಳೆಯ ಹಿತ್ತಾಳೆ ಲೆಕ್ಕದಲ್ಲಿ ಮಾರಿದ್ದ ಗ್ಯಾಸ್ ಲೈಟ್ ಗಳನ್ನು ವಾಪಾಸು ಪಡೆಯುವ ಹಪಾಹಪಿಯು ಇಲ್ಲಿ ಕಂಡು ಬರಲಾರಂಭಿಸಿದೆ.
ಪುರಾತನ ಕಲಾಕೃತಿಗಳನ್ನು, ವಸ್ತುಗಳನ್ನು ಸಂಗ್ರಹಿಸುವುದು ಹವ್ಯಾಸವಾಗಿರಿಸಿಕೊಂಡವರು ತಕ್ಕ ಮಟ್ಟಿನ ಹೆಚಿನ ಬೆಲೆ ಯನ್ನು ನೀಡಿ ಇಂತಹ ವಸ್ತಗಳನ್ನು ಸಂಗ್ರಹಿಸುವುದು ಸರ್ವೇ ಸಾಮಾನ್ಯ ಆದರೆ ಲಕ್ಷ ಕೋಟಿಗಳನ್ನು ನೀಡಿ ತಮ್ಮ ಅದೃಷ್ಟವೆನ್ನುವುದನ್ನು ಬದಲಾಯಿಸಿ ಕೊಳ್ಳುವುದೆಂದರೆ….ಕುಂದಾಪುರದ ಪೋಲಿಸರೇ ಉತ್ತರಿಸಬೇಕು. ಅದರೆ ಇಂತಹ ಪೆಟ್ರೋ ಮ್ಯಾಕ್ಸ್ ಹೊಂದಿರುವವರು ಸದ್ಯ ಖರೀದಿದಾರರ ಹುಡುಕಾಟದಲರುವುದಂತೂ ಸತ್ಯ..!