ಮಂಗಳೂರು, ಸೆ.25 : ಬೆಸೆಂಟ್ ಶಾಲೆ ಹಾಗೂ ಶಿಲಾ ಇಂಟರ್‌ನ್ಯಾಶನಲ್ ಸ್ಕೂಲ್ ಉಡುಪಿ ಇಲ್ಲಿ ನಡೆದ ವಲಯ ಮತ್ತು ತಾಲೂಕು ಮಟ್ಟದ ಕರಾಟೆ ಪಂದ್ಯದಲ್ಲಿ ಇನ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲಾಯ್ಡ್ ಆರ್ಟ್ ಕೊಂಚಾಡಿ, ಡೋಜು ಶಾಲೆಯ ವಿದ್ಯಾರ್ಥಿಗಳು 8 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ವೃಶಾಲಿ, ಪ್ರಖ್ಯಾತ್, ಪ್ರತೀಕ್ಷಾ, ಶಮಿತ್, ವಿಷ್ಣು, ಅಶ್ವಿನಿ, ಶ್ರುತೀಕ್ ಹಾಗೂ ಶಿಕ್ಷಕರಾದ ಸೆನ್ಸಯ್ ಜಾನ್ ರಿಚರ್ಡ್ ಮತ್ತು ಪ್ರತೀಕ್ ಯು. ಪೂಜಾರಿ ಇವರನ್ನು ಚಿತ್ರದಲ್ಲಿ ಕಾಣಬಹುದು.