ಉಡುಪಿ: ಯುವತಿಯನ್ನು ಚುಡಾಯಿಸಿದ ವಿಚಾರಕ್ಕೆ ಪೊಲೀಸರು ವಿಚಾರಣೆ ನಡೆಸಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ತೆಂಕನಿಡಿಯೂರಿನ ಯುವಕರ ಗುಂಪು ಚುಡಾಯಿಸಿತು ಎಂದು ಯುವತಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ತಾನು ತಪ್ಪು ಮಾಡಿಲ್ಲ ಎಂದು ಮಾನಕ್ಕೆ ಅಂಜಿ ಯುವಕನೋರ್ವ ಕೀಟನಾಶಕ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಪ್ರವೀಣ್ ಉಡುಪಿಯ ಮಲ್ಪೆ ಸಮೀಪದ ತೆಂಕನಿಡಿಯೂರಿನವನು. ಪ್ರವೀಣ್ ಮತ್ತು ಗೆಳೆಯರು ವಾರದ ಹಿಂದೆ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದಾಗ ಬೈಕ್
ಪಲ್ಟಿಯಾಗಿತ್ತು. ಈ ಸಂದರ್ಭ ದಾರಿಯಲ್ಲಿ ನಡೆದು ಸಾಗುತ್ತಿದ್ದ ಯುವತಿ ನಕ್ಕಿದ್ದಾಳೆ. ಯುವತಿಯನ್ನು ಯುವಕರ ತಂಡ ದಬಾಯಿಸಿದೆ. ಆದರೆ ಯುವತಿ ಯುವಕರು ಅನುಚಿತ ವರ್ತನೆ ನಡೆಸಿ ಕಾರು ಅಡ್ಡ ಇಟ್ಟು ಬೆದರಿಸುತ್ತಾರೆ, ಬೈಕ್‌ನಲ್ಲಿ ಬಂದು ಸ್ಟೇರ್ ಮಾಡುತ್ತಾರೆ ಎಂದು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡುತ್ತಾಳೆ.
ಈಕೆಯ ದೂರಿನಂತೆ ಪೊಲೀಸರು ೯ ಮಂದಿಯ ತಂಡವನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿದ್ದಾರೆ. ಹೆತ್ತವರ ಜೊತೆ ಮತ್ತೆ ಕರೆಸಿ ಮುಚ್ಚಳಿಕೆ ಬರೆಸಿದ್ದಾರೆ.ಕಳೆದ ರಾತ್ರಿ ಪೊಲೀಸರು ಮೆಹಂದಿ ಕಾರ್ಯಕ್ರಮಕ್ಕೆ ಬಂದು ಪ್ರವೀಣನನ್ನು ಮತ್ತೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದ ಪ್ರವೀಣ್ ಕೀಟನಾಶಕ ಕುಡಿದಿದ್ದಾನೆ ಎಂದು ಆತನ ಸ್ನೇಹಿತರು ಆರೋಪಿಸಿದ್ದು, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗಿದೆ ಎಂಬುದು ಸ್ನೇಹಿತರ ವಾದ.
ಡೆತ್‌ನೋಟ್ ಬರೆದಿಟ್ಟಿದ್ದ: ಮನನೊಂದ ಯುವಕ ತನ್ನ ತಪ್ಪಿಲ್ಲ ಎಂದು ಡೆತ್ ನೋಟ್ ಬರೆದಿದ್ದಾನೆ. ಪೊಲೀಸರ ಪ್ರಕಾರ ಈ ತಂಡ ಗಾಂಜಾ ಚಟ ಇರುವಂಥದ್ದು. ಯುವತಿಯರನ್ನು ಚುಡಾಯಿಸುವುದು, ಕೀಟಲೆ ಕೊಡುವುದೂ ಇದೆಯಂತೆ. ಘಟನೆ ನಂತರ ಗಾಂಜಾ ಸಿಗದೆ ಪ್ರವೀಣ ಆತ್ಮಹತ್ಯೆಗೆ ಯತ್ನಿಸಿದ ಎಂಬುದು ಪೊಲೀಸರ ಆರೋಪವಾಗಿದೆ.
ಒಟಿನಲ್ಲಿ ಯುವಕ ಬಚಾವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.