ಭಾರತದ ವಿಜ್ಞಾನಿಗಳು ಮಾಡಿರುವ ಅಭೂತಪೂರ್ವ, ಸಾಧನೆಯ ಫಲವಾಗಿ 24 -09-2014 ರಂದು ಮಂಗಳ ಗ್ರಹಕ್ಕೆ ‘ಮೋಮ್’ ( Mars Orbitary Mission) ನೌಕೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಯಲ್ಲಿ ನಿಲ್ಲಿಸಿರುವುದು ಒಂದು ಐತಿಹಾಸಿಕ ಯಶಸ್ಸು. ಇದನ್ನು ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುವುದು ಬಹಳ ಗೌರವದ ವಿಷಯ.
ಈ ದೃಷ್ಟಿಯಿಂದ ಸುಳ್ಯದ ಸ್ನೇಹಶಾಲೆಯಲ್ಲಿ 25-09-2014 ರಂದು ಆಡಳಿತ ಮಂಡಳಿಯವರು, ಎಲ್ಲ ವಿದ್ಯಾರ್ಥಿಗಳೂ, ಶಿಕ್ಷಕರೂ, ಸಿಬ್ಬಂದಿ ವರ್ಗದವರು ಗೋಡೆ ಪರದೆಯ ಮೇಲೆ ಬಣ್ಣದಲ್ಲಿ ಅದ್ದಿದ ಹಸ್ತ ಮುದ್ರೆಯನ್ನು ಒತ್ತುವ ಮೂಲಕ ಚಿತ್ರರಚಿಸಿ ಸಂಭ್ರಮಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ಚಿಂತನೆಯಂತೆ ಚಿತ್ರಕಲಾ ಶಿಕ್ಷಕ ಶ್ರೀ ಪ್ರಸನ್ನ ಐವರ್ನಾಡು ನೇತೃತ್ವದಲ್ಲಿ ‘ಮಂಗಳಯಾನಕ್ಕೆ ಶುಭವಾಗಲಿ’ ಚಿತ್ರ ಅದ್ಭುತವಾಗಿ ಸಿದ್ಧಗೊಂಡಿತು. ಈ ಸಂದರ್ಭದಲ್ಲಿ ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಎಂಬ ಘೋಷಣೆಗೈಯಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮತ್ತು ಶಿಕ್ಷಕ ವೃಂದದವರು ಚಿತ್ರರಚನೆಯಲ್ಲಿ ಪಾಲ್ಗೊಂಡರು.
ಇದೊಂದು ವೈಶಿಷ್ಟ್ಯ ಪೂರ್ಣವಾದ ಕಾರ‍್ಯಕ್ರಮವಾಗಿ ಮಕ್ಕಳ ಮನಸ್ಸಿನಲ್ಲಿ ಸದಾ ನೆನಪು ಉಳಿಯುವ ಸಂಭ್ರಮವಾಯಿತು.