ಕರಾವಳಿ

ಹೊಟ್ಟೆಯಲ್ಲಿ ಬ್ಯಾಂಡೇಜ್ ಬಟ್ಟೆ ಬಿಟ್ಟ ವೈದ್ಯರ ವಿರುದ್ದ ಕೇಸು ದಾಖಲು..

Pinterest LinkedIn Tumblr

ಕುಂದಾಪುರ: ರಾಜ್ಯಾದ್ಯಂತ ಸುದ್ದಿ ಮಾಡಿದ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಹೊಟ್ಟೆಯಲ್ಲಿ ಬ್ಯಾಂಡೇಜ್ ಬಟ್ಟೆ ಬಿಟ್ಟು ಹೊಲಿಗೆ ಹಾಕಿದ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ತರು ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಕೇಸು ದಾಖಲಿಸಿ ಪರಿಹಾರದ ಮೊರೆ ಹೋಗಿದ್ದಾರೆ.

cloth
ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಈ ಕುರಿತು ಸಂತ್ರಸ್ತೆ ಸುಲೋಚನಾ ಶೆಟ್ಟಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮೂಲಕ ದೂರು ನೀಡಿದ್ದಾರೆ.

ಘಟನೆ ಹಿನ್ನೆಲೆ: ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದ ಸುಲೋಚನಾ ಅವರ ಹೊಟ್ಟೆಯಲ್ಲಿ ಬಟ್ಟೆಯನ್ನು ಇಟ್ಟು ವೈದ್ಯರು ಹೊಲಿಗೆ ಹಾಕಿದ್ದು ಮಾತ್ರವಲ್ಲ ಈ ಪ್ರಕರಣ ಬೆಳಕಿಗೆ ಬಂದಾಗ ಸಂತ್ರಸ್ತೆ ಮನೆಯವರಿಗೆ ಉಡಾಫೆ ಮಾತನಾಡುವ ಕೆಲಸವನ್ನು ಈ ವೈದ್ಯರು ಮಾಡಿದ್ದರು. ಕುಂದಾಪುರದ ಶ್ರೀದೇವಿ ನರ್ಸಿಂಗ್ ಹೋಂನ ಡಾ. ಭವಾನಿ ರಾವ್ ಮತ್ತು ಡಾ. ರವೀಂದ್ರ ರಾವ್ ಅವರ ವಿರುದ್ಧ ಈಗ ದೂರು ದಾಖಲಾಗಿದೆ.  ಕರ್ನಾಟಕ ಹೈಕೋರ್ಟ್ ನಿವ್ರತ್ತ ನ್ಯಾಯಾಧೀಶೆ- ಆಯೋಗದ ಅಧ್ಯಕ್ಷೆ ಇಂದ್ರಕಲಾ, ಸದಸ್ಯೆ ವಿಜಯಲಕ್ಷ್ಮೀ ಅವರ ಎದುರು ಮುಂದಿನ ವಿಚಾರಣೆ ದಿನಾಂಕ ಅಕ್ಟೋಬರ್ 17ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

Write A Comment