ಮಂಗಳೂರು: ಸೆ. 27 : ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಜಾಗತಿಕ ಹೃದಯ ದಿನಾಚರಣೆಯಂದು ‘ಹೃದಯ ನಡಿಗೆ’ಕಾರ್ಯಕ್ರಮವನ್ನು ದಿ.28.9.2014 ಭಾನುವಾರದಂದು ಆಯೋಜಿಸಿದೆ. ಅಂದು ಪೂರ್ವಾಹ್ನ 7.25ಕ್ಕೆ ಪ್ರಾರಂಭವಾಗುವ ನಡಿಗೆಯಲ್ಲಿ 1.5 ಕಿ.ಮೀ. ದೂರವನ್ನು ಕ್ರಮಿಸಲಾಗುವುದು. ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆವರಣದಿಂದ ಪಂಪ್‌ವೆಲ್ ಮೂಲಕ ಫಾದರ್ ಮುಲ್ಲರ್‍ಸ್ ಜಂಕ್ಷನ್‌ಗೆ ಬಂದು ಅಲ್ಲಿಂದ ಬೆಂದೂರ್‌ವೆಲ್ ಜಂಕ್ಷನ್‌ಗೆ ಚಲಿಸಿ ಮರಳಿ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆವರಣದಲ್ಲಿ ನಡಿಗೆಯು ಕೊನೆಗೊಳ್ಳುವುದು.
ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆಡಳಿತ ನಿರ್ದೇಶಕರೂ ಮುಖ್ಯ ಹೃದಯ ತಜ್ಞರೂ ಆಗಿರುವ ಡಾ. ಯೂಸೆಫ್ ಕುಂಬ್ಳೆಯವರು ‘ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಇಂತಹ ಸಾರ್ವಜನಿಕ ಎಚ್ಚರಿಕೆ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತದೆ. ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದ ಸಾವಿರಕ್ಕೂ ಮಿಕ್ಕ ‘ಹೃದಯವಂತ’ರು ಇಂದೀಗ ಸಹಜ ಹಾಗೂ ಆರೋಗ್ಯವಂತ ಬದುಕನ್ನು ಬದುಕುತ್ತಿದ್ದಾರೆ. ಅವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನಡಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಈ ಸಂದೇಶವು ರಾಜ್ಯವ್ಯಾಪಿಯಾಗಿ ಪ್ರಸಾರಗೊಳ್ಳುತ್ತದೆ’ಎಂದರು.
ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಅಧ್ಯಕ್ಷರಾಗಿರುವ ಡಾ. ಅಲಿ ಕುಂಬ್ಳೆಯವರು, ‘ಸಮಾಜದ ಸೇವೆ ಮಾಡುವುದಕ್ಕೆ ನಮಗೆ ದೊರಕಿದ ಅಪೂರ್ವ ಸಂದರ್ಭವಿದು. ನಮ್ಮ ಉದ್ದೇಶ ಹಾಗೂ ದರ್ಶನ ಕೂಡ ಹೃದಯ ರೋಗಿಗಳ ಸೇವೆಯೇ ಆಗಿದೆ’ ಎಂದು ಹೇಳಿದರು.
‘ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಒಂದೂವರೆ ಕಿ.ಮೀ.ನಷ್ಟು ಘೋಷಣೆ ಕೂಗುತ್ತ ಹೃದಯದ ಕುರಿತ ಜಾಗೃತಿ ಮೂಡಿಸುತ್ತ ಸಾಗುವ ದೃಶ್ಯಕ್ಕೆ ಮಂಗಳೂರು ನಗರ ಸಾಕ್ಷಿಯಾಗಲಿದೆ’ಎಂದು ಸಂಘಟಕರು ಅಭಿಪ್ರಾಯ ವ್ಯಕ್ತಪಡಿಸಿದರು.ಜಾಗತಿಕ ಹೃದಯ ದಿನಾಚರಣೆಯ ಅಂಗವಾಗಿ ದಿ.29.9.2014ರಿಂದ ಮುಂದಿನ ಮೂವತ್ತು ದಿನಗಳ ತನಕ ವಿಶೇಷ ಹೃದಯ ತಪಾಸಣಾ ಪ್ಯಾಕೇಜನ್ನು ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಘೋಷಿಸಿದೆ.
ಇದೇ ಸಂದರ್ಭದಲ್ಲಿ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ದಿ. 29.9.2014ರಂದು, ಸೋಮವಾರ 5.30ಕ್ಕೆ ನಗರದ ದೀಪಾ ಕಂಫರ್ಟ್ಸ್‌ನಲ್ಲಿ ವಿಚಾರ ಸಂಕಿರಣವೊಂದನ್ನು ಆಯೋಜಿಸಿದೆ. ಸಮಾಜದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಹೃದಯ ಸಂಬಂಧೀ ಖಾಯಿಲೆಗಳ ಹಾಗೂ ತತ್ಸಂಬಂಧೀ ವಿಚಾರಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಹೃದಯತಜ್ಞರು ಡಾ. ಯೂಸೆಫ್ ಕುಂಬ್ಳೆ, ಉದಯವಾಣಿ ದಿನಪತ್ರಿಕೆ ಬ್ಯೂರೋ ಮುಖ್ಯಸ್ಥರು, ಮನೋಹರ ಪ್ರಸಾದ್, ಸಂತ ಎಲೋಶಿಯಸ್ ಕಾಲೇಜು, ಮಂಗಳೂರು, ರಿಜಿಸ್ಟ್ರಾರ್ ಡಾ. ಎ.ಎಂ.ನರಹರಿ, ಮಂಗಳೂರು,ಜಿಲ್ಲಾ ಆರೋಗ್ಯಾಧಿಕಾರಿ,ಡಾ. ಶಿವಕುಮಾರ್, ಮಂಗಳೂರು ವಿವಿ ಕಾಲೇಜು,ಅಸಿಸ್ಟಂಟ್ ಪ್ರೊಫೆಸರ್, ಡಾ. ಭುವನೇಶ್ವರಿ ಹೆಗ್ಗಡೆ, ಯುವ ಮೋರ್ಚಾ .ಪ್ರಧಾನ ಕಾರ್ಯದರ್ಶಿ, ಕ್ಯಾ. ಬ್ರಿಜೇಶ್ ಚೌಟ, ವಕೀಲರು ಶಶಿರಾಜ ರಾವ್ ಕಾವೂರು, ಶ್ರೀಮತಿ ಸುಮಾ ರಮೇಶ, ಮಂಗಳೂರು ಘಟಕ.ಐಎಂಎ ಅಧ್ಯಕ್ಷರು, ಡಾ. ರಾಜೇಶ್ ಬಲ್ಲಾಳ್, ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಈ ವಿಚಾರ ಸಂಕಿರಣ ಭಾಗವಹಿಸಲಿದ್ದಾರೆ.
ಸಂಪರ್ಕ; ಚೆಂಗಪ್ಪ ಎ.ಡಿ. ಮೊ: 07259016599, ಸಹಾಯಕ ಮ್ಯಾನೇಜರ್ ಮೀಡಿಯಾ