ಕುಂದಾಪುರ: ಆಧುನಿಕರಣದತ್ತ ಮುಖ ಮಾಡಿ ಅಭಿವೃದ್ಧಿ ಸಾಧಿಸುವ ಭರದಲ್ಲಿರುವ ಹೊತ್ತಿನಲ್ಲೂ ಉಳಿಸಿಕೊಂಡು ಬಂದಿರುವ ಕಲ್ಲಾಗರ, ಶಾಂತಿನಿಕೇತನ, ಕೈಪಾಡಿ, ಹುಂಚಾರ್ ಬೆಟ್ಟು, ಬೆಟ್ಟಗಾರ, ಎಕೆಜಿ ರಸ್ತೆ ಮುಂತಾದ ಪ್ರದೇಶಗಲ್ಲಿರುವ ಬಡ ಮಧ್ಯಮ ವರ್ಗದವರ ಮನೆ ಮತ್ತು ಕೃಷಿಭೂಮಿಯನ್ನು ಕಬಳಿಸುವ ಹುನ್ನಾರವನ್ನು ಕುಂದಾಪುರ ಪುರಸಭೆಯ ಉದ್ದೇಶಿತ ಒಳಚರಂಡಿ ಯೋಜನೆಯು ಹೊಂದಿದೆ.
ಸಮೀಪದಲ್ಲೇ ಇರುವ ರಿಂಗ್ ರೋಡ್ ಮೂಲಕ ಅಥವಾ ಹೊಳೆಬದಿಯಲ್ಲಿ ಈ ಒಳಚರಂಡಿ ಯೋಜನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲೇ ಅನುಷ್ಠಾನಗೊಳಿಸಬಹುದಾದರೂ ಕೂಡ ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶದ ಮಧ್ಯೆ ಈ ಯೋಜನೆಯ ಅನುಷ್ಠಾನಕ್ಕೆ ಹೊರಟಿರುವುದು ಇದೊಂದು ಅವೈಜ್ಞಾನಿಕವಾದ, ಕೃಷಿ ವಿರೋಧಿ ಮತ್ತು ಜನವಿರೋಧಿ ನೀತಿಯನ್ನು ಒಳಗೊಂಡಿದೆ.
ಆ ಕಾರಣಕ್ಕಾಗಿ ಈ ಯೋಜನೆಯನ್ನು ರಿಂಗ್ ರೋಡ್ ಮೂಲಕ ಅಥವಾ ಊರಿನ ಸುತ್ತಲೂ ಆವರಿಸಿರುವ ಹೊಳೆಯ ತಟದ ಮೂಲಕ ಅನುಷ್ಠಾನಗೊಳಿಸುವ ಮೂಲಕ ಕೃಷಿ ಭೂಮಿಯನ್ನು ಮತ್ತು ಜನವಸತಿ ಭೂಮಿಯನ್ನು ಉಳಿಸಿಕೊಡುವಂತೆ ಜಿಲ್ಲ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿಅ, ನಗರ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ, ಕೃಷಿಭೂಮಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಶಿವ ಮೆಂಡನ್, ರಾಜೇಶ್, ನಿತ್ಯಾನಂದ ಹವಾಲ್ದಾರ್, ಕೃಷ್ಣ ಪೂಜಾರಿ, ವೆಂಕಟ ಪೂಜಾರಿ, ವಿಜಯ್, ರಮೇಶ ಮಕ್ಕಿಮನೆ, ಚಂದ್ರ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರ