ಮಂಗಳೂರು, ಸೆ.29: ಬ್ಯಾರೀಸ್ ತಾಂತ್ರಿಕ ಮಹಾ ವಿದ್ಯಾಲಯ (ಬಿಐಟಿ)ದ ಗ್ರೀನ್ ಕ್ಲಬ್‌ನವರು ಭಾರತೀಯ ಹಸಿರು ನಿರ್ಮಾಣ ಕೌನ್ಸಿಲ್(ಐಜಿಬಿಸಿ)ನ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ‘ಹಸಿರು ನಡಿಗೆ-2014’ ಕಾರ್ಯಕ್ರಮ ಆಯೋಜಿಸಿದ್ದರು.
ನಗರದ ನೆಹರೂ ಮೈದಾನದಲ್ಲಿ ಹಸಿರು ನಡಿಗೆಗೆ ಚಾಲನೆ ನೀಡಿದ ಶಾಸಕ ಮೊಯ್ದಿನ್ ಬಾವ, ಆರೋಗ್ಯಕರ ವಾತಾವರಣಕ್ಕೆ ಹಸಿರು ಪರಿಸರ ಪೂರಕ. ಆದುದರಿಂದ ಪರಿಸರ ಸಂರಕ್ಷಣೆಗೆ ನಾವು ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಬಿಐಟಿಯಂತಹ ಸಂಸ್ಥೆ ಸಮಯ ಮೀಸಲಿಟ್ಟಿರುವುದು ಪ್ರಶಂಸನೀಯ ಎಂದರು.
ಬಿಐಟಿ ಪ್ರಾಂಶುಪಾಲ ಪಾಲಾಕ್ಷಪ್ಪ ಮಾತನಾಡಿ, ‘ಸ್ವಚ್ಛ ನಗರ ಹಸಿರು ನಗರ’ ಎಂಬ ಪರಿಕಲ್ಪನೆಯೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ನಗರ ಹಾಗೂ ಹಸಿರು ನಗರದಿಂದ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವುದು, ಇದರಿಂದಾಗುವ ಪ್ರಯೋಜನ, ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಐಟಿ ಈ ಜಾಥಾ ಆಯೋಜಿಸಿದೆ ಎಂದರು.
ಬಿಐಟಿ ಕ್ಯಾಂಪಸ್ ನಿರ್ದೇಶಕ ಡಾ.ಸಾಯಿನಾಥ್, ಬಿಐಟಿ ಗ್ರೀನ್ ಕ್ಲಬ್‌ನ ಸಂಯೋಜಕ ಶೇಖ್ ಮೊಯ್ದಿನ್ ಕೆ.ಎಂ. ಈ ಸಂದರ್ಭ ಉಪಸ್ಥಿತರಿದ್ದರು. ಜಾಥಾವು ಬೆಳಗ್ಗೆ ನಗರದ ನೆಹರೂ ಮೈದಾನದಿಂದ ಹೊರಟು ಹಂಪನಕಟ್ಟೆ ವೃತ್ತ, ಕೆ.ಎಸ್.ರಾವ್ ರಸ್ತೆ, ಎಂ.ಜಿ.ರೋಡ್ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.
ಮಂಗಳ ಕ್ರೀಡಾಂಗಣದಲ್ಲಿ ಸಮಾರೋಪ:
ಮಂಗಳ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ ಭಾಗವಹಿಸಿ ಸಿಂಗಾಪುರದಂತಹ ದೇಶಗಳ ಜನರಲ್ಲಿರುವ ಶ್ರದ್ಧೆ, ಕಾರ್ಯತತ್ಪರತೆ ನಾವೂ ಮೈಗೂಡಿಸಿಕೊಂಡು ಸ್ವಚ್ಛ-ಹಸಿರು ನಗರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿ ಕೊಳ್ಳೋಣ ಎಂದರು.
ಮಂಗಳ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ ಭಾಗವಹಿಸಿ ಸಿಂಗಾಪುರದಂತಹ ದೇಶಗಳ ಜನರಲ್ಲಿರುವ ಶ್ರದ್ಧೆ, ಕಾರ್ಯತತ್ಪರತೆ ನಾವೂ ಮೈಗೂಡಿಸಿಕೊಂಡು ಸ್ವಚ್ಛ-ಹಸಿರು ನಗರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿ ಕೊಳ್ಳೋಣ ಎಂದರು.