ಮಂಗಳೂರು,ಸೆ.29: ಪ್ರತಿಯೋವ೯ ವ್ಯಕ್ತಿ ಸಮಾಜದ ಜತೆಗೂಡಿ ಸಮಾಜಮುಖಿ ಕಾಯ೯ ಮಾಡಿದಾಗ ಮಹಾತ್ಮಗಾಂಧೀಜಿ ಅವರ ರಾಮರಾಜ್ಯ ಸಾಕಾರಗೊಳ್ಳಲು ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಮಂಗಳೂರಿನ ಉವ೯ ಹ್ಯೊಗೆಬೈಲಿನ ಜೈಭಾರತಿ ತರುಣ ವೃಂದದ ಸುವಣ೯ ಮಹೋತ್ಸವದ ಅಂಗವಾಗಿ ಜೈಭಾರತಿ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಹೊಗೆಬೈಲಿನಲ್ಲಿ ನೂತನವಾಗಿ ನಿಮಾ೯ಣಗೊಂಡ `ಸುವಣ೯ ಭಾರತಿ ‘ಕಟ್ಟಡವನ್ನು ಸೆ.28ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಮಂಗಳೂರಿನ ಮೇಯರ್ ಮಾಹಾಬಲ ಮಾಲ೯ ಅವರು ಮಾತನಾಡಿ, ಕಳೆದ 5 ದಶಕಗಳಿಂದ ಜನೋಪಯೋಗಿ ಕಾಯ೯ಕ್ರಮಗಳನ್ನು ಹಮ್ಮಿಕೊಂಡ ವೃಂದದ ಸಾಧನೆಅನುಕರಣೀಯಎಂದರು.
ನೂತನಕಟ್ಟಡಕ್ಕೆ ನಿವೇಶನವನ್ನುಉಚಿತವಾಗಿ ಒದಗಿಸಿದ ಉದ್ಯಮಿ ಶಿವಾನಂದ ಸುರತ್ಕಲ್ ಅವರು ನಾಮಫಲಕ ಅನಾವರಣಗೊಳಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹನುಮಂತ ಕಾಮತ್, ಇಂಜಿನಿಯರ್ ಬಾಬಾ ಅಲಂಕಾರ್, `ಮೂಡ’ದ ಮಾಜಿಅಧ್ಯಕ್ಷಡಾ|ಬಿ.ಜಿ.ಸುವಣ೯, ಸ್ಥಳೀಯ ಕಾಪೊ೯ರೇಟರ್‌ಗಳಾದ ರಾಧಾಕೃಷ್ಣ ಅಶೋಕನಗರ ಹಾಗೂ ನಾಗವೇಣಿ ಅವರು ಸಂಘಕ್ಕೆ ಶುಭ ಹಾರೈಸಿದರು.
ಜೈಭಾರತಿ ತರುಣ ವೃಂದದ ಗೌರವ ಅಧ್ಯಕ್ಷ ಶೇಖರ್ ಶೆಟ್ಟಿ, ಕಾಯಾ೯ಧ್ಯಕ್ಷ ದಾವನ್ ಕುಮಾರ್, ಕಾಯ೯ದಶಿ೯ ರಾಜೇಶ್ ಸಾಲ್ಯಾನ್, ಮಹಿಳಾ ವೃಂದದ ಅಧ್ಯಕ್ಷೆ ಸವಿತಾ ವರದರಾಜ್ ಮತ್ತಿತರರು ಉಪಸ್ಥಿತರಿದ್ದರು.
ಜೈಭಾರತಿ ತರುಣ ವೃಂದದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿ, ಚೇತನ್‌ಕುಮಾರ್ ವಂದಿಸಿದರು. ಉಪಾಧ್ಯಕ್ಷ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾಯ೯ಕ್ರಮ ನಿವ೯ಹಿಸಿದರು.