ಕರಾವಳಿ

ಉಡುಪಿ ಜಿಲ್ಲೆ ರಕ್ಷಣೆಗೆ ಪೊಲೀಸ್‌ ಕಮಾಂಡೋ ಪಡೆ ಸಿದ್ಧ: ಇನ್ನು ಹೊಯ್ಸಳ, ಚೀತಾ 24*7

Pinterest LinkedIn Tumblr

Udupi Dist_Police_commondo (6)

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಕ್ರತ್ಯಗಳಿಗೆ ಇನ್ನು ಕಡಿವಾಣ ಬೀಳಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವ್ಯವಸ್ಥೆ ಸರ್ವ ಸನ್ನದ್ಧವಾಗಿದೆ. ಪೊಲೀಸ್ ಇಲಾಖೆ ತನ್ನ ಹೊಯ್ಸಳ, ಚೀತಾ ಸೇವೆಗೆ ಆಧುನಿಕ ರೂಪ ನೀಡುವ ಜೊತೆಗೆ ವಿವಿಧ ತೆರೆನಾದ ತರಬೇತಿ ಪಡೆದ 30 ಪೊಲೀಸರನ್ನೊಳಗೊಂಡ ಕಮಾಂಡೋ ಪಡೆಯನ್ನು ರಚಿಸಿ ಸ್ಟ್ರಾಂಗ್ ಟೀಮ್ ರಚಿಸಿದ್ದಾರೆ.

ಜಿಲ್ಲಾ ಎಸ್ಪಿ ಪಿ.ರಾಜೇಂದ್ರ ಪ್ರಸಾದ್ ಅವರು ಬುಧವಾರ ಚಂದು ಮೈದಾನದ ಡಿಎಆರ್ ಪೆರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಎಎಸ್‌ಪಿಗಳಾದ ಸಂತೋಷ್ ಕುಮಾರ್ ಅಣ್ಣಾಮಲೈ ಉಪಸ್ಥಿತರಿದ್ದರು.

Udupi Dist_Police_commondo (7) Udupi Dist_Police_commondo (8) Udupi Dist_Police_commondo (2) Udupi Dist_Police_commondo (1) Udupi Dist_Police_commondo (3) Udupi Dist_Police_commondo Udupi Dist_Police_commondo (4) Udupi Dist_Police_commondo (5)

ಕಮಾಂಡೋ ಪಡೆ: ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 30 ಮಂದಿಯ ಕಮಾಂಡೋ ಪಡೆಯನ್ನು ರಚಿಸಲಾಗಿದೆ. ಇದರಲ್ಲಿ 10ಮಂದಿ ಭಯೋತ್ಪಾದನೆ ನಿಗ್ರಹ ತರಬೇತಿ, 6 ಮಂದಿ ನಕ್ಸಲ್ ನಿಗ್ರಹ, 4ಮಂದಿ ಬಾಂಬ್ ಪತ್ತೆ ತರಬೇತಿಯನ್ನು ಪಡೆದಿದ್ದಾರೆ. ಇನ್ನುಳಿದ 10 ಮಂದಿಗೆ ಉನ್ನತ ತರಬೇತಿಯನ್ನು ನೀಡಲಾಗುವುದು. ಈ ಪಡೆ ದಿನದ 24ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿರುತ್ತದೆ ಎಂದರು.

ಏನೇನು ತರಬೇತಿ : ಎಕೆ 47 ಸೇರಿದಂತೆ ವಿವಿಧ ಆಯುಧಗಳ ತರಬೇತಿ, ಆಂಬುಷ್, ಪೆಟ್ರೋಲಿಂಗ್, ಕಾರ್ಡನ್ ಆ್ಯಂಡ್ ಸರ್ಚ್ ಅಪರೇಶನ್, ಕೂಂಬಿಂಗ್, ರೋಪ್ ಕ್ಲೈಂಬಿಂಗ್, ಜಂಗಲ್ ಕ್ಯಾಂಪ್, ಮ್ಯಾಪ್ ರೀಡಿಂಗ್, ಅಶ್ರುವಾಯು ಪ್ರಯೋಗ ಮೊದಲಾದ ತರಬೇತಿಯನ್ನು ಈ ಪಡೆಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಗಣ್ಯ ವ್ಯಕ್ತಿಗಳಿಗೆ ರಕ್ಷಣೆ, ರಸ್ತೆ ತೆರವು, ಅಪಘಾತ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ಅಲ್ಲದೆ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಈ ಪಡೆಯನ್ನು ಬಳಸಿಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.

ಚೀತಾ, ಹೊಯ್ಸಳ ಗಸ್ತು: ಇಲಾಖೆಯ ಚೀತಾ ಸೇವೆಯಲ್ಲಿ ಲಭ್ಯವಿರುವ 4 ಬೈಕ್‌ಗಳನ್ನು ನವೀಕರಿಸಿ ಲೈಟ್, ಪಿಎ ಸಿಸ್ಟಂ, ಸೈರನ್ ಹಾಗೂ ವಾಕಿಟಾಕಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಉಡುಪಿ ನಗರ, ಮಲ್ಪೆ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಈ ಪಡೆ ಗಸ್ತು ತಿರುಗಲಿದೆ. ಸರಗಳ್ಳತನ, ಪಿಕ್‌ಪಾಕೆಟ್, ದರೋಡೆ ಮೊದಲಾದ ಅಪರಾಧಗಳನ್ನು ತಡೆಗಟ್ಟುವುದು ಇದರ ಮುಖ್ಯ ಕೆಲಸವಾಗಿರುತ್ತದೆ. ದಿನದ 24 ಗಂಟೆಯೂ 3 ಪಾಳಿಯಲ್ಲಿ ಈ ಸೇವೆ ಲಭ್ಯವಿರುತ್ತದೆ.

ಕುಂದಾಪುರ, ಬ್ರಹ್ಮಾವರ, ಮಲ್ಪೆ, ಮಣಿಪಾಲ, ಉಡುಪಿ, ಕಾಪು, ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಅನೂಕೂಲವಾಗುವಂತೆ ಹೊಯ್ಸಳ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.ವಾಹನದಲ್ಲಿ ಜಿಪಿಎಸ್, ಪ್ರಥಮ ಚಿಕಿತ್ಸೆ ಕಿಟ್, ಅಗ್ನಿಶಾಮಕ, ಬಾಡಿ ಪ್ರೊಟೆಕ್ಟರ್,ಟಾರ್ಚ್, ಡ್ರ್ಯಾಗನ ಲೈಟ್, ಹಗ್ಗ, ಆಯುಧ, ಸ್ಟ್ರೆಚರ್ ಹಾಗೂ ಅಶ್ರುವಾಯುವನ್ನು ಅಳವಡಿಸಲಾಗಿದೆ. ಚೀತಾದಂತೆ ಇದರ ಸೇವೆಯೂ ದಿನದ 24ಗಂಟೆಯೂ ಲಭ್ಯವಿರುತ್ತದೆ.

ಉಡುಪಿ ನಗರದ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವೆಡೆ ಸುಮಾರು 15 ಸಿ.ಸಿ. ಕೆಮರಾಗಳನ್ನು ಅಳವಡಿಸಲಾಗಿದೆ. ಮುಂದೆ ಕಾರ್ಕಳ, ಕುಂದಾಪುರ, ಮಲ್ಪೆ ಹಾಗೂ ಮಣಿಪಾಲದಲ್ಲಿಯೂ ಕಣ್ಗಾವಲು (ಸಿಸಿ ಟಿವಿ)ಕೆಮರಾಗಳನ್ನು ಅಳವಡಿಸಲಾಗುವುದು ಎಂದ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಕಮಾಂಡೊ, ಚೀತಾ, ಹೊಯ್ಸಳ ಪಡೆ ಉಡುಪಿ ನಗರದಲ್ಲಿ ಸಂಚಾರ ನಡೆಸಿತು.

Write A Comment