ಮಂಗಳೂರು,ಅಕ್ಟೋಬರ್.02 : ಅಖಿಲ ಭಾರತ ತುಳು ಒಕ್ಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಡಿಸೆಂಬರ್ 12 ರಿಂದ 14 ರ ವರೆಗೆ ಅಡ್ಯಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ವಿಶ್ವ ತುಳು ಪರ್ಬ ನಡೆಯಲಿದ್ದು, ಈ ಬಗ್ಗೆ ಸ್ವಾಗತ ಸಮಿತಿಯನ್ನು ರಚಿಸುವ ಸಲುವಾಗಿ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಯು.ಧರ್ಮಪಾಲ ದೇವಾಡಿಗರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.
ಈ ಸಭೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷರಾದ ದಾಮೋದರ ನಿಸರ್ಗ ‘ವಿಶ್ವತುಳು ಪರ್ಬ’ ಸಮಿತಿಯ ಪ್ರಧಾನ ಸಂಚಾಲಕರಾದ ನವನೀತ ಶೆಟ್ಟಿ ಕದ್ರಿ, ಒಕ್ಕೂಟದ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಸಮಿತಿಯ ಸಂಚಾಲಕ ಎ.ಸಿ.ಭಂಡಾರಿ, ಅಡ್ಯಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಸುಧಾಕರ ಆಚಾರ್ಯ, ಅಡ್ಯಾರ್ ಗುತ್ತು ಮಹಾಬಲ ಶೆಟ್ಟಿ , ಜಯಲಕ್ಷ್ಮೀ. ಎಸ್.ಹೆಗ್ಡೆ ಬೈದ್ಯಾವು ಗುತ್ತು ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಯು.ಎಂ.ಭೂಷಿ, ಆಡಳಿತ ಅಧಿಕಾರಿ ಶ್ರೀಲತಾ, ಜಯರಾಮ ಶೇಖ, ದಿವಾಕರ ನಾಕ್, ಮಾಧವ ನಾಕ್, ಪ್ರದೀಪ್ ಕುಮಾರ್ ಶೆಟ್ಟಿ, ರತ್ನಾಕರ ಅಮೀನ್, ಜನಾರ್ಧನ ಅರ್ಕುಳ ಉಪಸ್ಥಿತರಿದ್ದರು.
ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯ ಸ್ವಾಗತ ಸಮಿತಿಗೆ ಗೌರವ ಅಧ್ಯಕ್ಷರಾಗಿ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ಅಡ್ಯಾರು ಗುತ್ತು ಮಹಾಬಲ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಅಡ್ಯಾರು ದಿವಾಕರ ನಾಕ್, ಸಂಚಾಲಕರಾಗಿ ಜಯಲಕ್ಷ್ಮೀ. ಎಸ್.ಹೆಗ್ಡೆ, ಪ್ರೋ.ಯು.ಎಂ.ಭೂಷಿ, ರತ್ನಾಕರ ಅಮೀನ್, ಸುರೇಂದ್ರ ಕಂಬ್ಳಿ ಅಡ್ಯಾರು ಗುತ್ತು, ಜನಾರ್ಧನ ಅರ್ಕುಳ, ಶ್ರೀಮತಿ ಲಕ್ಷ್ಮೀ, ರತ್ನಾಕರ ಅಮೀನ್, ದಯಾನಂದ ಅಡ್ಯಾರ್, ಜಯಶೀಲ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿಯಾಗಿ ಅಡ್ಯಾರು ಪುರುಷೋತ್ತಮ ಕೆ. ಕಾರ್ಯದರ್ಶಿಗಳಾಗಿ ಗುರುರಾಜ್ ಶೆಟ್ಟಿ ಶ್ರೀಮತಿ ಶ್ರೀಲತಾ, ಸುಧಾಕರ ಆಚಾರ್ಯ, ಲ್ಯಾನ್ಸಿ ಸಿಕ್ವೇರಾ, ಪ್ರಸನ್ನಕುಮಾರ್, ಶೇಖಬ್ಬ, ಜಯಂತಿ ಹಾಗೂ ಸತೀಶ್ ಶೆಟ್ಟಿ ಆಯ್ಕೆಯಾದರು.