ಮಂಗಳೂರು,ಅ.03 : ವಿಶ್ವ ತುಳುವೆರೆ ಪರ್ಬ 2014 ರ ಸಂಘಟನಾ ಸಮಿತಿಯ ಪದಾಧಿಕಾರಿಗಳು ತುಳು ಒಕ್ಕೂಟ ಅಧ್ಯಕ್ಷರು ಧರ್ಮಪಾಲ ಯು. ದೇವಾಡಿಗ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ತುಳುವನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವಲ್ಲಿ ತುಳುನಾಡಿನ ರಾಜಕೀಯ ನೇತಾರರೆಲ್ಲರು ಸಂಘಟಿತರಾಗಿ ಕಾರ್ಯೋನ್ಮುರಾಗಬೇಕೆಂದು ಐವನ್ ಡಿ’ಸೋಜ ತಿಳಿಸಿದರು.
ಸಮಿತಿಯ ಪ್ರಮುಖರಾದ ತುಳು ಕೂಟದ ಸ್ಥಾಪಕ ಸದಸ್ಯ ಎ.ಸಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಪ್ರಧಾನ ಸಂಚಾಲಕರು ಕದ್ರಿ ನವನೀತ ಶೆಟ್ಟಿ, ಸಂಚಾಲಕರು ಲೀಲಾಕ್ಷ ಕರ್ಕೇರ, ಕೋಶಾಧಿಕಾರಿ ಕರುಣಾಕರ್ ಶೆಟ್ಟಿ ಉಪಸ್ಥಿತರಿದ್ದರು.