ಕರಾವಳಿ

ಮಂಗಳೂರಿನಲ್ಲಿ ಶೀಘ್ರವೇ ಸೈಬರ್ ಕ್ರೈಂ ಠಾಣೆ ಕಾರ್ಯಾರಂಭ :

Pinterest LinkedIn Tumblr

police_comisinor_press_5

ಮಂಗಳೂರು, ಅ.9: ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಕದ್ರಿಯಲ್ಲಿ ಎಸಿಪಿ ಟ್ರಾಫಿಕ್ ಕಚೇರಿ ಹೊಂದಿದ್ದ ಸ್ಥಳದಲ್ಲಿ ಸೈಬರ್ ಕ್ರೈಂ ಠಾಣೆಯನ್ನು ಆರಂಭಿಸಲು ನಿರ್ದೇಶನ ದೊರಕಿದೆ. ಮೂಲಭೂತ ಸೌಕರ್ಯಗಳು ದೊರಕಿದಾಕ್ಷಣ ಠಾಣೆ ಕಾರ್ಯಾರಂಭಿಸಲಿದೆ. ಪೊಲೀಸ್ ಆಯುಕ್ತ ಕಚೇರಿಯ ಸಿಬ್ಬಂದಿಗೆ ಅಲ್ಲಿ ತರಬೇತಿ ನೀಡಿ ನಿಯೋಜಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಸೈಬರ್ ಅಪರಾಧಗಳಿಗೆ ಸಂಬಂಧಿಸಿ ತನಿಖೆಯು ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳಿಂದ ಸೈಬರ್ ಕ್ರೈಂ ಠಾಣೆಯ ಸಹಕಾರದೊಂದಿಗೆ ನಡೆಯಲಿದೆ. ಬಳಿಕ ಪ್ರಕರಣದ ಗಂಭೀರತೆಯ ಮೇರೆಗೆ ಅದನ್ನು ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗುವುದು. ಈ ಸೈಬರ್ ಕ್ರೈಂ ಠಾಣೆಯು ಡಿಜಿ- ಸಿಐಡಿಯಡಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಮೀಟರ್ ಬಡ್ಡಿ ದಂಧೆಗೆ ಕಡಿವಾಣ : ದೂರು ಬಂದಲ್ಲಿ ಸೂಕ್ತ ಕ್ರಮ

ನಗರದಲ್ಲಿ ಮೀಟರ್ ಬಡ್ಡಿ ದಂಧೆಯ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಅಥವಾ ದೂರುಗಳಿದ್ದಲ್ಲಿ ನೀಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಡ್ಡಿಗೆ ಹಣ ನೀಡಿ ವಸೂಲು ಮಾಡುವಲ್ಲಿ ಹಲವಾರು ರೀತಿಯ ನಿಯಮಾವಳಿಗಳಿವೆ. ಅದನ್ನು ಮೀರಿ ಮೀಟರ್ ಬಡ್ಡಿ ದಂಧೆ ನಡೆಸುವ ವರ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅಥವಾ ದೂರು ಬಂದಲ್ಲಿ ಸೂಕ್ತ ಕ್ರಮ ಜರಗಿಸುವುದಾಗಿ ಕಮಿಷನರ್ ತಿಳಿಸಿದರು.

ಜೈನ ಬಸದಿ ಕಳ್ಳತನದಲ್ಲಿ ಸ್ಥಳೀಯ ಕಾರ್ಮಿಕರ ಕೈವಾಡ – ಶಂಕೆ..?

ಮೂಡುಬಿದಿರೆಯ ಜೈನ ಬಸದಿಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣದಲ್ಲಿ ಸ್ಥಳೀಯ ಕಾರ್ಮಿಕರೇ ಭಾಗಿಯಾಗಿರುವ ಸಂಶಯಗಳಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆ ಜೈನ ಬಸದಿಯ ವಿಗ್ರಹ ಕಳವು ಆಗಿದ್ದ ಸಂದರ್ಭ ಬಸದಿ ಗಳವರು ಖಾಸಗಿ ಕಾವಲುಗಾರರನ್ನು ನೇಮಕ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ಹಣ ಕಾಸಿನ ತೊಂದರೆಯಿಂದಾಗಿ ಕಾವಲುಗಾರರ ನೇಮಕ ಮಾಡಲು ಬಸದಿಗಳವರು ಹಿಂಜರಿ ಯುತ್ತಿರುವುದಾಗಿ ತಿಳಿದು ಬಂದಿದೆ ಎಂದು ಆರ್. ಹಿತೇಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Write A Comment