ಮಂಗಳೂರು,ಅ.09: ಡಿಸೆಂಬರ್ 12ರಿಂದ 14 ರ ವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವ ತುಳು ಪರ್ಬ 2014 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಅವರನ್ನು ಸಂಘಟನಾ ಸಮಿತಿ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ಎ.ಸಿ.ಭಂಡಾರಿ, ದಾಮೋದರ ನಿಸರ್ಗ, ಶಶಿಧರ್ ಶೆಟ್ಟಿ, ಡಾ.ಕಿಶೋರ್ ರೈ, ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು.