ಮುಂಬಯಿ,ಅ. 13: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ಸಂಘ ಮುಂಬಯಿ ಇದರ ಸದಾನಂದ ಸುವರ್ಣ ಸಾಂಸ್ಕೃತಿಯ ಪ್ರತಿಷ್ಠಾನದ ಅಂಗವಾಗಿ ಅ. 11 ರಂದು ಸಂಘದ ಸಮರಸ ಭವನದಲ್ಲಿ ಡಾ. ಶಿವರಾಮ ಕಾರಂತರ ಸಂಸ್ಮರಣೆ 2014 ನ್ನು ಹಮ್ಮಿಕೊಳ್ಳಲಾಗಿದ್ದು ದೆಹಲಿಯ ವಿಮರ್ಷಕ ಡಾ. ಪುರುಷೋತ್ತಮ ಬಿಳಿಮಲೆ ವಿಶೇಷ ಉಪನ್ಯಾಸವನ್ನು ನೀಡಿದರು. ಕಾರಂತರು ಹೊಸ ತಲೆಮಾರಿನ ಯೋಜನೆಯನ್ನು ಹಾಕಿದವರು. ಅವರ ಜೊತೆ ಒಡನಾಟ ಸಿಕ್ಕಿದ್ದೇ ಭಾಗ್ಯ. ಅವರು ಯಕ್ಷಗಾನವನ್ನು ಕಲಾರೂಪವಾಗಿ ಕಂಡರು ಎಂದು ನುಡಿದರು.
ದತ್ತಿ ನಿಧಿಯ ಸ್ಥಾಪಕ ಸದಾನಂದ ಸುವರ್ಣರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷರಾದ ಪ್ರಕಾಶ್ ಜಿ. ಬುರ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಓಂದಾಸ್‌ಕಣ್ಣಂಗಾರ್ ಸ್ವಾಗತ ಭಾಷಣ ಮಾಡಿದರು. ಡಾ. ಭರತ್ ಕುಮಾರ್ ಪೊಲಿಪು ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್