ಕರಾವಳಿ

ಹಣಕಾಸು ವಿವಾದ : ತಂಡದಿಂದ ಯುವಕನ ಅಪಹರಣ – ಬಿಡುಗಡೆ

Pinterest LinkedIn Tumblr
 kidnaping
ಬಂಟ್ವಾಳ, ಅ.13: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನೋ ರ್ವನನ್ನು ಅಪಹರಿಸಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರಪಾಡಿ ನಿವಾಸಿ ಅನೂಪ್ (26) ಎಂಬಾತ ಅಪಹರಣಕ್ಕೆ ಒಳಗಾದ ಯುವಕ. ಅನೂಪ್ ಕುಂಪಲದ ಫೈನಾನ್ಸ್‌ವೊಂದರಿಂದ ಬಡ್ಡಿಗೆ ಹಣ ಸಾಲ ಪಡೆದು ಹಿಂತಿರು ಗಿಸದೇ ಇದ್ದ ಹಿನ್ನೆಲೆಯಲ್ಲಿ ತಂಡವೊಂದು ಈತನನ್ನು ಬ್ರಹ್ಮರಕೂಟ್ಲು ಎಂಬಲ್ಲಿಂದ ಅಪಹರಿಸಿತ್ತು ಎನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಬಂಟ್ವಾಳದಾದ್ಯಂತ ಆತಂಕದ ಸ್ಥಿತಿ ಉಂಟಾಗಿತ್ತು. ರಾಮಕೃಷ್ಣಮಯ್ಯ ಎಂಬವರು ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು. ವಿಚಾಯ ಪೊಲೀಸ್ ಠಾಣೆ ಮೆಟ್ಟಿಲೇರು ತ್ತಿದ್ದಂತೆಯೇ, ಅಪಹರಿಸಿದ ತಂಡ ಅನೂಪ್‌ನೊಂದಿಗೆ ಹಣ ಹಿಂತಿರುಗಿಸುವ ಬಗ್ಗೆ ಒಪ್ಪಂದ ಮಾಡಿಕೊಂಡು ಬಿ.ಸಿ.ರೋಡಿನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳುದು ಬಂದಿದ್ದು, ಬಳಿಕ ನಗರ ಪೊಲೀಸರು ಅನೂಪ್‌ರನ್ನು ಬಂಟ್ವಾಳ ವೃತ್ತ ನಿರೀಕ್ಷಕರ ಮುಂದೆ ಹಾಜರುಪಡಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅನೂಪ್ ತಾನು ಪಡೆದುಕೊಂಡ ಸಾಲವನ್ನು ಮರುಪಾವತಿಸದೇ ಇದ್ದುದಕ್ಕೆ, ಆತ ನನ್ನು ಬೆದರಿಸುವ ಉದ್ದೇಶದಿಂದ ತಂಡ ಈ ಕೃತ್ಯ ಎಸಗಿದೆ ಎಂದು ಹೇಳಲಾಗಿದೆ.

Write A Comment