ಉಡುಪಿ, ಅ.13: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ದೃಶ್ಯಗಳನ್ನು ಆಧರಿಸಿ ಉಪ್ಪಾ ಆಯೋಜಿಸಿದ್ದ ‘ಟ್ಯಾಮ್ರಾನ್ ಕಲರ್ಸ್ ಆಫ್ ಶ್ರೀ ಕೃಷ್ಣ’ ರಾಜ್ಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಆಯ್ದ ಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೆರವೇರಿಸಿದರು.
ಕೇವಲ ಭಗವಂತನ ಪ್ರತಿಮೆ ಪೂಜೆ ಮಾಡುವುದರಿಂದ ದೇವರ ಅನುಗ್ರಹ ಸಿಗಲು ಸಾಧ್ಯವಿಲ್ಲ. ಬಡವರ ಸೇವೆ ಯನ್ನು ಮಾಡುವುದರಿಂದ ಅವರಲ್ಲಿರುವ ಭಗವಂತನ ಸಂತೋಷ ಹಾಗೂ ಅನುಗ್ರಹಕ್ಕೆ ನಾವು ಪಾತ್ರರಾಗಬೇಕು ಎಂದು ಕಾಣಿಯೂರು ಶ್ರೀ ಹೇಳಿದರು.
ಇದೇ ಸಂದರ್ಭದಲ್ಲಿ ಟ್ಯಾಮ್ರಾನ್ ಪ್ರಾಯೋಜಿಸಿದ 32 ಸಾವಿರ ರೂ. ವೌಲ್ಯದ ಲೆನ್ಸ್ನ್ನು ಪ್ರಥಮ ಬಹು ಮಾನ ವಿಜೇತ ಅಪುಲ್ ಇರಾಗೆ ವಿತರಿಸಲಾಯಿತು. ದ್ವಿತೀಯ ಪ್ರಸನ್ನ ಪೆರ್ಡೂರು, ತೃತೀಯ ವಿಜಯೇಂದ್ರ ಅಂಬಲಪಾಡಿ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಜಯಕರ ಶೆಟ್ಟಿ ಇಂದ್ರಾಳಿ, ಮಠದ ದಿವಾನ ರಘುಪತಿ ಆಚಾರ್ಯ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿದರು. ಆಸ್ಟ್ರೋ ಮೋಹನ್ ಕಾರ್ಯಕ್ರಮ ನಿರೂಪಿಸಿದರು.