ಕರಾವಳಿ

ಸೀತಾನದಿ ಸಂಸ್ಮರಣೆ-ಪ್ರಶಸ್ತಿ ಪ್ರದಾನ ಸಮಾರಂಭ

Pinterest LinkedIn Tumblr
 yashgan_news_photo_1
ಬೆಳ್ತಂಗಡಿ, ಅ.13: ಮೂರು ಲೋಕ ಗಳನ್ನು ಕಣ್ಣಮುಂದೆ ಮಾತುಗಳಲ್ಲೇ ಸೃಷ್ಟಿಸಬಲ್ಲ ಅನನ್ಯವಾದ ಅದ್ಭ್ಬುತವಾದ ಕರಾವಳಿಯ ಗಂಡು ಕಲೆ ಯಕ್ಷಗಾನ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

ಅವರು ರವಿವಾರ ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆದ ಆದರ್ಶ ಶಿಕ್ಷಕ- ಪ್ರಸಿದ್ಧ ಪಸಂಗ ಕರ್ತ-ಯಕ್ಷಗಾನ ಅರ್ಥಧಾರಿ- ವಿಮರ್ಶಕ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದಿಂದ ಅವರ 27ನೆ ವರ್ಷದ ಸಂಸ್ಮರಣೆ-ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಯಕ್ಷಗಾನ ದೇಶ-ವಿದೇಶದಲ್ಲೂ ಪ್ರಚಲಿತದಲ್ಲಿದೆ. ಸಂಸ್ಕೃತಿಯನ್ನು ಸಾದರಪಡಿಸುವ, ಹಿತಾನುಭವವನ್ನು ನೀಡುವ ಕಲೆಯಾಗಿದೆ. ಇದೀಗ ಯಕ್ಷಗಾನ ಮೇಳಗಳು ಕ್ಷೀಣಿಸುತ್ತಾ ಇದೆ. ಸೀತಾನದಿ ಗಣಪಯ್ಯ ಶೆಟ್ಟಿಯ ವರು ಅಧ್ಯಾಪನದೊಂದಿಗೆ ಕಲೆಯನ್ನು ಕಲಿಸಿದ ಮಹಾನ್ ವ್ಯಕ್ತಿ. ಅವರ ಪ್ರಸಂಗಗಳು ಜನಪ್ರಿಯವಾಗಿದೆ ಎಂದರು.

ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಮಾತನಾಡಿ, ಯಕ್ಷಗಾನ ಕರಾವಳಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಕಲೆ. ಸೀತಾನದಿ ಗಣಪಯ್ಯ ಶೆಟ್ಟಿ ಅವರು ಯಕ್ಷರಂಗಕ್ಕೆ ನೀಡಿದ ಕೊಡುಗೆ ದೊಡ್ಡದು. ಅಂತಹ ಮೇರುವ್ಯಕ್ತಿಯ ಸಂಸ್ಮರಣೆ ಉಜಿರೆಯಲ್ಲಿ ನಡೆಯುತ್ತಿರು ವುದು ನಮ್ಮ ಭಾಗ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಕನ್ಯಾಡಿಯ ಯಕ್ಷ ಭಾರತಿಯ ಅಧ್ಯಕ್ಷ ಹರಿದಾಸ ಗಾಂಭೀರ್, ್ರತಿಷ್ಠಾನ ಸಮಿತಿಯ ಉಪಾಧ್ಯಕ್ಷ ಎಸ್.

ಜಯರಾಮ ಶೆಟ್ಟಿ ಪಡಂಗಡಿ ಉಪಸ್ಥಿತರಿದ್ದರು. ಸೀತಾನದಿ ಗಣಪಯ್ಯ ಶೆಟ್ಟಿ ಯಕ್ಷಗಾನ ಪ್ರಶಸ್ತಿ ಪುರಸ್ಕೃತರಾದ ಪ್ರಸಿದ್ಧ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸೀತಾನದಿ ಗಣಪಯ್ಯ ಶೆಟ್ಟಿ ಅವರ ಸಂಸ್ಮರಣೆಯನ್ನು ಪೊಲ್ಯ ಉಮೇಶ್ ಶೆಟ್ಟಿ ಮಾಡಿದರು. ಅಭಿನಂದನಾ ಭಾಷಣವನ್ನು ಮಣಿಪಾಲ ಯಂ.ಐ.ಟಿ.ಯ ಉಪನ್ಯಾಸಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾಡಿದರು. ಪ್ರತಿಷ್ಠಾನ ಸಮಿತಿಯ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನದ ಪಟ್ಟಿಯನ್ನು ಸಮಿತಿಯ ಕೋಶಾಧಿಕಾರಿ ಸೀತಾನದಿ ವಿಠ್ಠಲ ಶೆಟ್ಟಿ ವಾಚಿಸಿದರು.

ಸನ್ಮಾನ ಪತ್ರವನ್ನು ಮಹೇಶ್ ವಾಚಿಸಿದರು. ಪ್ರತಿಷ್ಠಾನದ ಸದಸ್ಯ ರಘುರಾಮ ಶೆಟ್ಟಿ ಸಾಧನಾ ಉಜಿರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ವಂದಿಸಿದರು. ಉಪನ್ಯಾಸಕ ಡಾ. ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತೆಂಕು-ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಮಾಗಧ ವಧೆ ಯಕ್ಷಗಾನ ತಾಳಮದ್ದಲೆ ನಡೆಯಿತು.

Write A Comment