ಕುಂದಾಪುರ : ಭಾರತೀಯ ಸಂಸ್ಕ್ರತಿ ಹಾಗೂ ಪರಂಪರೆಗೆ ಅದರದೆಯಾದ ವಿಶೇಷತೆ ಇದೆ , ಅದೇ ರೀತಿಯಲ್ಲಿ ಮುಂದುವರಿದ ಆಧುನಿಕತೆ ಪ್ರಭಾವದಿಂದ ಸಂಸ್ಕಾರಯುತ ಬದುಕು ಹಾದಿ ತಪ್ಪುತ್ತಿದೆ ಎನ್ನುವ ಆತಂಕದ ನಡುವೆಯೂ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ ಗೌರವಾಧ್ಯಕ್ಷ ಉಪ್ಪುಂದ ಲಕ್ಷ್ಮಿನಾರಾಯಣ ವೈದ್ಯ ಹಾಗೂ ಶ್ರೀಮತಿ ಸೀತಾ ಲಕ್ಷ್ಮಿ ದಂಪತಿಗಳ ಪುತ್ರ ಚಿ| ಗುರುರಾಜ್ ಹಾಗೂ ಚಿ|ಸೌ| ಗೌತಮಿ ಶುಭ ವಿವಾಹದಲ್ಲಿ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ನೂತನ ವರನನ್ನು ಮೆರವಣಿಗೆಯಲ್ಲಿ ಕೊಂಡ್ಯೊಯುವ ಮೂಲಕ ನಮ್ಮ ಶ್ರೀಮಂತ ಸಂಸ್ಕ್ರತಿ ಹಾಗೂ ಪರಂಪರೆ ಸ್ಮರಿಸುವ ಕ್ಷಣ ಇತೀಚೆಗೆ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆಯಿತು.
ವಿವಾಹ ಸಮಾರಂಭದಲ್ಲಿ ಕರಾವಳಿ ಕರ್ನಾಟಕದ ಸಂಸ್ಕ್ರತಿಗೆ ತಕ್ಕಂತೆ ಉಡುಗೆ ತೊಡುಗೆ ಹಾಗೂ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ವರನನ್ನು ಹಾಗೂ ವಧುವನ್ನು ಮಂಚಲಿನಲ್ಲಿ ಮತ್ತು ಶ್ವೇತ ವರ್ಣದ ಕುದುರೆ ಸಾರೋಟಿನಲ್ಲಿ ವರನ ತಂದೆಯನ್ನು ಏರಿ ಕುಳಿತು ಸಾಗುವ ಮೂಲಕ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಿಂದ ಸುಮಾರು ಒಂದು ಕಿಲೋ ಮೀಟರ್ ರಾ.ಹೆದ್ದಾರಿ ಯಲ್ಲಿ ಮಾಂಗಲ್ಯ ಮಂದಿರದ ವರೆಗೆ ನೆರೆದ ಸಾವಿರಾರು ಮಂದಿ ಭವ್ಯ ಮೆರವಣಿಗೆಯೊಂದಿಗೆ ಸಾಗುವ ದೃಶ್ಯ ಸಾಮಾನ್ಯವಾಗಿತ್ತು.
ಐದು ದಶಕಗಳ ಹಿಂದಿನ ಜನಪದೀಯ ಲೋಕದ ಪರಂಪರೆಯನ್ನು ನೆನಪಿಸುವ ಜನಪದ ಉತ್ಸವವೋಪಾದಿಯಲ್ಲಿ ಅತ್ಯಂತ ವೈಭವದಿಂದ ಕೊಂಬು ಕಹಳೆ, ಹಗ್ಗಳ ರಣ ಕಹಳೆ, ಪತಾಕೆ, ಬೇಂಡು , ತಟ್ಟಿರಾಯ, ಕೀಲು ಕುದುರೆ ನವಿಲು ನೃತ್ಯ , ಯಕ್ಷಗಾನ ವೇಷಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಂಚಲಿನಲ್ಲಿ ವಧು , ಚಂಡೆ ವಾದನ ದೊಂದಿಗೆ ಸಾಗುವುದರೊಂದಿಗೆ ವೈಭವದ ವಿವಾಹ ಸಮಾರಂಭಕ್ಕೆ ವಿಶೇಷ ಮೆರುಗು ತಂದುಕೊಟ್ಟಿತು.
ಅತ್ಯಂತ ಉತ್ಸವದಿಂದ ಮದುವೆಗೆ ಆಗಮಿಸಿದ ಅತಿಥಿಗಳು ಪರಂಪರೆಗೆ ಚ್ಯುತಿ ಬರದಂತೆ ಈ ವಿವಾಹ ಮೆರವಣಿಗೆಯನ್ನು ನೆರದಿದ್ದ ಸಾರ್ವಜನಿಕರು ಹಾಗೂ ದಾರಿಹೋಕರು ನೋಡಿ ಆನಂದಿಸುವುದ್ದರೊಂದಿಗೆ ಮೊಬಲ್‌ನಲ್ಲಿ ಈ ಅಪರೂಪದ ಸುಂದರ ದೃಶ್ಯ ಶ್ರಾವ್ಯವನ್ನು ಸೆರೆಹಿಡಿಯುತ್ತಿರುವ ಸನ್ನಿವೇಶ ಕಂಡು ಬಂತು.
ನಮ್ಮ ಈ ಇತಿಹಾಸದ ಪುಟದಲ್ಲಿ ರಾಜ ಮಹಾರಾಜರುಗಳು ತಮ್ಮ ಪ್ರತಿಷ್ಠೆಯನ್ನು ಅಭಿವ್ಯಕ್ತಿಸುವ ನಿಟ್ಟಿನಲ್ಲಿ ಷೋಢಶ ಕರ್ಮಗಳಲ್ಲಿ ಮುಖ್ಯವಾಗಿ ಸೀಮಂತೋನ್ನಯನ, ನಾಮಕರಣ, ಅಕ್ಷರಾಭ್ಯಾಸ, ಚೂಡಾಕರ್ಮ ಉಪನಯನ, ವಿವಾಹ ಹಾಗೂ ಅಪರ ಕರ್ಮಗಳಲ್ಲಿ ಪರಂಪರೆಗೆ ಚ್ಯುತಿ ಬಾರದಂತೆ ನಿರ್ವಹಿಸುತ್ತಿದ್ದರು ಆದರೆ ಇಂದಿನ ಕಾಲ ಘಟ್ಟದಲ್ಲಿ ಪಾಶ್ಚಿಮಾತ್ಯ ಸಂಸ್ಕ್ರತಿಯ ಪ್ರಭಾವ ಹಾಗು ಹಿರಿಯರ ಮಾರ್ಗದರ್ಶನದ ಕೊರತೆ ಪ್ರಭಾವದಿಂದಾಗಿ ಇಂದು ಯುವ ಸಮೂದಾಯದಲ್ಲಿ ಆಸಕ್ತ ಹೀನವಾದ ನಮ್ಮ ಶ್ರೀಮಂತ ಸಂಸ್ಕ್ರತಿಯ ಅಧ್ಯಯನ ಇಂದು ನಮ್ಮ ಸಂಸ್ಕಾರಯುತ ಪ್ರಜ್ಞೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ನಮ್ಮ ಸಂಪ್ರದಾಯವನ್ನು ಶುಭ ಕಾರ್ಯದಲ್ಲಿ ವೈಭವೋಪೇತವಾಗಿ ಅನಾವರಣಗೊಳಿಸಲು ಪ್ರಯತ್ನಿಸಿದ ಉಪ್ಪುಂದ ಲಕ್ಷ್ಮಿನಾರಾಯಣ ವೈದ್ಯ ರು ಪ್ರಯತ್ನ ನಿಜಕ್ಕೂ ಪಶಂಸನೀಯ
ಕೇವಲ ಭಾಷಣ , ಬರಹ, ಭಿತ್ತಿ ಪತ್ರ ಪ್ರದರ್ಶನ, ಘೋಷಣೆಗಳಿಂದ ನಮ್ಮ ಸಂಸ್ಕೃತಿ ,ಸಂಪ್ರದಾಯ ಪರಂಪರೆ ಉಳಿಯಲಾರದು ಈ ನಿಟ್ಟಿನಲ್ಲಿ ನಮ್ಮ ಭವ್ಯ ಸಂಸ್ಕೃತಿಯನ್ನು ಆಚರಣೆಗೆ ತರಬೇಕು ಎನ್ನುವ ಹಂಬಲದಿಂದ ನನ್ನ ಪುತ್ರನ ವಿವಾಹದಲ್ಲಿ ಸತ್ಯ ದರ್ಶನ ತೋರ್ಪಡಿಸುವ ಪ್ರಯತ್ನ ಮಾಡಿದ್ದೇನೆ. ಈ ಸಂಪ್ರದಾಯ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎನ್ನುವುದೇ ನಮ್ಮ ಹಾರೈಕೆ.
– ಉಪ್ಪುಂದ ಲಕ್ಷ್ಮಿನಾರಾಯಣ ವೈದ್ಯ( ವರನ ತಂದೆ) ಗೌರವಾಧ್ಯಕ್ಷ ರು ,ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್