ಉಡುಪಿ: ಜನನಿ ಕನ್ನಡ ಸಂಘ ಸಾಬ್ರಕಟ್ಟೆ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಡುಪಿ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ, ಕರಾವಳಿ ಮಣ್ಣಿನ ಗ್ರಾಮೀಣ ಕ್ರೀಡೆಗಳ ಕ್ರೀಡಾಕೂಟ “ ಕೆಸ್ರ್ ಗದ್ಯಂಗ್ ಆಡಿ ಕಾಂಬ ” ಚಿತ್ರನಟ ದಿ. ಯಡ್ತಾಡಿ ಸುನೀಲ್ ಶೆಟ್ಟಿ ನೆನಪಿನೊಂದಿಗೆ, ಯಡ್ತಾಡಿಯ ಅವರ ಮನೆ ವಠಾರದಲ್ಲಿ ನಡೆಯಿತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ, ಬಾರಕೂರು ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಕ್ರೀಡೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿಯೇ ಪ್ರೋತ್ಸಾಹ ಕಡೆಮೆಯಾಗುತ್ತಿದ್ದು, ಸರಕಾರ ಮತ್ತು ಸಂಘ-ಸಂಸ್ಥೆಗಳು ಜಂಟಿಯಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಜನಸೇವಾ, ಕ್ರೀಡಾಧಿಕಾರಿ ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ನಿರಂತರ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಜನನಿ ಯುವ ಕನ್ನಡ ಸಂಘದ ಕಾರ್‍ಯವೈಖರಿಯನ್ನು ಪ್ರಶಂಶಿಸಿದರು.
ಜನನಿ ಯುವ ಕನ್ನಡ ಸಂಘದ ಅಧ್ಯಕ್ಷ ಸಂತೋಷ ಕಾಂಚನ್, ಯಡ್ತಾಡಿ ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ ನಾಯ್ಕ್, ಜನನಿ ಯುವ ಕನ್ನಡ ಸಂಘದ ಗೌರವಾಧ್ಯಕ್ಷ ರವೀಂದ್ರನಾಥ ಕಿಣಿ, ಯುವವಾಹಿನಿ ಯಡ್ತಾಡಿ ಘಟಕದ ಅಧ್ಯಕ್ಷ ಪ್ರಕಾಶ ಪೂಜಾರಿ, ವಿನಾಯಕ ಯುವಕ ಮಂಡಲ ಯಡ್ತಾಡಿ ಇದರ ಅಧ್ಯಕ್ಷ ಪ್ರಶಾಂತ ಪೂಜಾರಿ, ಕೆದ್ಲಹಕ್ಲು ಸ್ನೇಹ ಕಲಾರಂಗದ ಅಧ್ಯಕ್ಷ
ರಾಘವೇಂದ್ರ ಶೆಟ್ಟಿ, ಅಚ್ಲಾಡಿ ಸನ್‌ಶೈನ್ ಗೆಳೆಯರ ಬಳಗದ ಗೌರವಾಧ್ಯಕ್ಷ ದಿನಕರ ಶೆಟ್ಟಿ, ಸೌಜನ್ಯ ಯುವಕ ಮಂಡಲದ ಉಪಾಧ್ಯಕ್ಷ ಸದಾಶಿವ ನಾಯ್ಕ್ ಉಪಸ್ಥಿತರಿದ್ದರು.
ಗ್ರಾಮೀಣ ಕ್ರೀಡೆಗಳ ಮೆರಗು :ಈ ಸಂದರ್ಭದಲ್ಲಿ ಮರೆಯಾಗುತ್ತಿರುವ ನಿಧಿ ಶೋದ, ಲಗೋರಿ, ಕಾಲ್ ಕಂಬ್ಳ, ಹಗ್ಗಜಗ್ಗಾಟ, ಬೆನ್‌ಚೆಂಡ್, ಓಟ ಸ್ಪರ್ದೆ, ನೀರು ತುಂಬಿಸುವ ಸ್ಪರ್ದೆ, ಗೋಣಿ ಚೀಲ ಓಟ, ಹಾಳೆ ಓಟ ಮುಂತಾದ ಕ್ರೀಡೆಗಳಲ್ಲಿ ನೂರಾರು ಮಂದಿ ಮಹಿಳೆಯರು,ಮಕ್ಕಳು, ಪುರುಷರ ಭಾಗವಹಿಸಿ ಕೆಸರಿನಲ್ಲಿ ಮಿಂಡೆದ್ದರು.
ಜನನಿ ಯುವ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಕೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.